ಸೆ.15; ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪೂರ್ವಭಾವಿ ಸಭೆ

0

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಪೂರ್ವಭಾವಿ ಸಭೆ ಸೆ.15ರಂದು ನಡೆಯಲಿದೆ.
ಮಧ್ಯಾಹ್ನ 2.30 ಗಂಟೆಗೆ ಸರಿಯಾಗಿ ಕೇರ್ಪಡ ದೇವಸ್ಥಾನದ ಸಭಾಂಗಣದಲ್ಲಿ ಅ.14ರಿಂದ ದೇವಾಲಯದಲ್ಲಿ ನಡೆಯುವ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷಸಭೆಯನ್ನು ಆಯೋಜಿಸಲಾಗಿದೆ.

ಆಮಂತ್ರಣ ವಿತರಣೆ,ಪ್ರತಿ ದಿನ ವೈದಿಕ ಪೂಜಾ ಕಾರ್ಯಕ್ರಮ ಅನ್ನದಾನದ ವ್ಯವಸ್ಥೆ, ಸ್ವಚ್ಚತೆ,ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ತಾವುಗಳು ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ವಿನಂತಿಸಲಾಗಿದೆ.