ಬೆಳ್ಳಾರೆ ಜೇಸಿ ವತಿಯಿಂದ ತಡಗಜೆ ಅಂಗನವಾಡಿಗೆ ಟಿವಿ ಕೊಡುಗೆ

0

ಸೋಲಾರ್ ಖರೀದಿಸಲು ಧನಸಹಾಯ

ಜೆಸಿಐ ಬೆಳ್ಳಾರೆ ಮತ್ತು ಯುವ ಜೆಸಿ ವಿಭಾಗ ಜೆಸಿ ಸಪ್ತಾಹ 2023ಅಂಗವಾಗಿ ವಲಯ ಅಧ್ಯಕ್ಷರ ಅಧಿಕೃತ ಭೇಟಿ ಸಂದರ್ಭದಲ್ಲಿ ಬೆಳ್ಳಾರೆ ತಡಗಜೆ (ಮಾಸ್ತಿಕಟ್ಟೆ) ಅಂಗನವಾಡಿಗೆ ಟಿವಿ ಕೊಡುಗೆ ಮತ್ತು ಬೆಳ್ಳಾರೆ ಅಂಗನವಾಡಿಗೆ ಸೋಲಾರ್ ಖರೀದಿಸಲು ಧನ ಸಹಾಯ ಮಾಡಲಾಯಿತು .


ವಲಯ xvಅಧ್ಯಕ್ಷ ಜೆಸಿ ಪುರುಷೋತ್ತಮ್ ಶೆಟ್ಟಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಲಯ xvಉಪಾಧ್ಯಕ್ಷ ದೇವರಾಜ ಕುದ್ಪಾಜೆ ಬೆಳ್ಳಾರೆ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷ ವೀಣಾ, ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಚಂದ್ರ ಹೆಗ್ಡೆ, ಪಂಚಾಯತ್ ಜಯಶ್ರೀ ಗಂಗಾಧರ, ಬೆಳ್ಳಾರೆ ಜೆಸಿಐನ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಅಜಪಿಲ, ವಲಯ 15ರ ವಲಯ ಅಧಿಕಾರಿ ಜೆಸಿ ನಿರ್ಮಲ ಜಯರಾಮ,ಮಾಸ್ತಿ ಕಟ್ಟೆ ಅಂಗನವಾಡಿ ಶಿಕ್ಷಕಿ ಶ್ರೀಮತಿ ಇಂದಿರಾ ಬೆಳ್ಳಾರೆ ಅಂಗನವಾಡಿಯ ಶಿಕ್ಷಕಿ ಭಾರತಿ ಮತ್ತು ಜೆಸಿಐ ಬೆಳ್ಳಾರೆ ಪದಾಧಿಕಾರಿಗಳು ಮತ್ತು ಪೂರ್ವ ಅಧ್ಯಕ್ಷರುಗಳು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಜೆ .ಸಿ ಅಧ್ಯಕ್ಷ ಸ್ವಾಗತಿಸಿ ವಲಯ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಜೆ ಸಿ ಕಾರ್ಯದರ್ಶಿ ಆನಂದ ಮಣಿಯಾಣಿ ವಂದಿಸಿದರು.