ಎಡಮಂಗಲ ಗ್ರಾಪಂ. ಜಮಾಬಂಧಿ

0

ಎಡಮಂಗಲ ಗ್ರಾ.ಪಂ.ನ‌ 2022 -23 ನೇ ಸಾಲಿನ ವಾರ್ಷಿಕ ಜಮಾಬಂಧಿ ಸೆ. 14ರಂದು ಗ್ರಾ. ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರುರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪಿ.ಕೆ. ವಿದ್ಯಾರಾಣಿ, ಪ್ರಭಾರ ಪಂ.ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲಲಿತಾ, ಎಡಮಂಗಲ ಗ್ರಾ.ಪಂ. ಪಿಡಿಒ ಶ್ರೀಮತಿ ಭವ್ಯ ಎಂ.ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಭವ್ಯ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ದೇವಿಪ್ರಸಾದ್ ಜಮಾಬಂಧಿ ವಿವರ ವಾಚಿಸಿದರು. ಕಾರ್ಯದರ್ಶಿ ಗೋಪಿನಾಥ್ ಡಿ ಮತ್ತು ಸಿಬ್ಬಂದಿ ವರ್ಗ, ಪಂಚಾಯತ್ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.