ಹರಿಹರ : ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ

0

ದ.ಕ ಜಿಲ್ಲಾ ಪಂಚಾಯತ್ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಶಿಬಿರ 15 ರಂದು ಹರಿಹರ ಪಲ್ಲತಡ್ಕ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯಕುಮಾರ್ ಅಂಗಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪಶುವೈದ್ಯಾಧಿಕಾರಿ ವೆಂಕಟಾಚಲಪತಿ ಹಾಗೂ ಸಿಬ್ಬಂದಿಗಳು.ಪಂ.ಉಪಾಧ್ಯಕ್ಷ ಜಯಂತ ಬಾಳುಗೋಡು, ಪಂಚಾಯತ್ ಸದಸ್ಯರುಗಳಾದ ದಿವಾಕರ ಮಂಡಾಜೆ ಪದ್ಮಾವತಿ ಕಲ್ಲೇಮಠ ಹಾಗೂ ಸಂಜೀವಿನಿ ಒಕ್ಕೂಟದ ಎಮ್ ಬಿ ಕೆ ವೇದಾವತಿ ಕಲ್ಲೇಮಠ ಹಾಗು ಸದಸ್ಯರುಗಳು,ಪಂ ಸಿಬ್ಬಂದಿಗಳು,ಊರವರು ಹಾಜರಿದ್ದರು. ದಿವಕರ ಮುಂಡಾಜೆ ಸ್ವಾಗತಿಸಿ ದನ್ಯವಾದಗೈದರು.
– ಕುಶಾಲಪ್ಪ ಕಾಂತುಕುಮೇರಿ