ಕೊಲ್ಲಮೊಗ್ರು ಪಿಡಿಒ ರವಿಚಂದ್ರ, ಕಲ್ಮಡ್ಕ ಪಿಡಿಒ ಪ್ರವೀಣ್ ರಿಗೆ ವರ್ಗಾವಣೆ

0

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಪಿಡಿಒ ರವಿಚಂದ್ರ ಅಕ್ಕಪ್ಪಾಡಿ ಹಾಗೂ ಕಲ್ಮಡ್ಕ ಪಿಡಿಒ ಪ್ರವೀಣ್ ಕುಮಾರ್ ರಿಗೆ ವರ್ಗಾವಣೆಯಾಗಿದೆ.

ಸರಕಾರ 108 ಪಿಡಿಒ ಗಳನ್ನು ವರ್ಗಾವಣೆಗೊಳಿಸಿ ಆದೇಶ ಮಾಡಿದ್ದು ತಾಲೂಕಿನ ಇಬ್ಬರು ಪಿಡಿಒ ಗಳಿಗೆ ವರ್ಗಾವಣೆ ಆದೇಶವಾಗಿದೆ. ಕೊಲ್ಲಮೊಗ್ರದ ರವಿಚಂದ್ರರಿಗೆ ಉಬರಡ್ಕ‌ ಮಿತ್ತೂರು ಗ್ರಾಮ ಪಂಚಾಯತ್ ಗೆ ಹಾಗೂ ಕಲ್ಮಡ್ಕದ ಪ್ರವೀಣ್ ರಿಗೆ ಕೊಡಿಯಾಲ ಗ್ರಾಮ ಪಂಚಾಯತ್ ಗೆ ವರ್ಗಾವಣೆ ಆದೇಶವಾಗಿದೆ.

ಚೆಂಬು ಗ್ರಾಮ ಪಂಚಾಯತ್ ಪಿಡಿಒ ನಂಜುಂಡಸ್ವಾಮಿಯವರಿಗೆ ಕುಶಾಲನಗರ ಹುಡಿಗೇರಿ ಗ್ರಾಮ ಪಂಚಾಯತ್ ಗೆ ವರ್ಗಾವಣೆಯಾಗಿದೆ.