ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ

0

ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕಾರ್ಯಪ್ಪ ಗೌಡ ಎ ರವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಸೆ.14 ರಂದು ಜರುಗಿತು.ಸಂಘವು ಒಟ್ಟು ರೂ5726505.33 ವಾರ್ಷಿಕ ವ್ಯವಹಾರ ನಡೆಸಿ ರೂ.92014.13 ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಲೀಟರಿಗೆ 32ಪೈಸೆ ಬೋನಸ್ ನೀಡುವುದಾಗಿ ಅವರು ತಿಳಿಸಿದರು.

ವೈದ್ಯಾಧಿಕಾರಿ ಡಾ.ಸಚೀನ್ ಹಾಗೂ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಮಾಹಿತಿ ನೀಡಿದರು.ಸಂಘದ ಉಪಾಧ್ಯಕ್ಷ ಎ.ಲಕ್ಷ್ಮಣ ಗೌಡ, ನಿರ್ದೇಶಕರಾದ ಮೋನಪ್ಪ ಗೌಡ ಎ, ಬೆಳ್ಯಪ್ಪ ಗೌಡ. ಡಿ, ದೇವಪ್ಪ ಪಿ, ಬಾಲಕೃಷ್ಣ ಗೌಡ ಕೆ, ಲಕ್ಷ್ಮೀನಾರಾಯಣ ನಡ್ಕ, ಶ್ರೀಮತಿ ಯಮುನಾ ರೈ ಮಾಳಿಗೆ, ಶ್ರೀಮತಿ ಆಶಾ ಕೆ, ಶಿವರಾಮ ಸಿ, ವಾಸುದೇವ ಎ, ಲತೀಫ್ ಸಿ, ಕಾರ್ಯದರ್ಶಿ ಶ್ರೀಮತಿ ತೀರ್ಥಾ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ನಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ತೀರ್ಥಾ ಡಿ. ವರದಿ ವಾಚಿಸಿದರು. ಬಾಲಕೃಷ್ಣ ಕೆ .ವಂದಿಸಿದರು.