ಸೆ.19 : ರೆಂಜಾಳ ಕ್ಷೇತ್ರದಲ್ಲಿ ಚೌತಿ ಉತ್ಸವ

0

ಶ್ರೀ ದೇವರಿಗೆ ವಿಶೇಷ ಪೂಜೆ, ಭಜನಾ ಕಾರ್ಯಕ್ರಮ, ಅಕ್ಷರಾಭ್ಯಾಸ, ಸಾಮೂಹಿಕ ಕಾರ್ತಿಕ ಪೂಜೆ

ಮರ್ಕಂಜ ಮತ್ತು ರೆಂಜಾಳ ಗ್ರಾಮಗಳ ಕಾರಣಿಕ ಕ್ಷೇತ್ರ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಾಸ್ಥಾನದಲ್ಲಿ ಚೌತಿ ಉತ್ಸವವು ಸೆ.19ರಂದು ನಡೆಯಲಿದೆ.

ಬೆಳಿಗ್ಗೆ ಉಷಾ ಪೂಜೆ, ಬಳಿಕ ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಂಗಡಿಮಜಲು, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಕೊರತ್ತೋಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಹಾಗೂ 12 ತೆಂಗಿನಕಾಯಿ ಗಣಪತಿ ಹವನ, ಅಕ್ಷರಾಭ್ಯಾಸ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.

ಸಂಜೆ ಶ್ರೀ ಶಿವಪಂಚಾಕ್ಷರಿ ಭಜನಾ ಮಂಡಳಿ ಮತ್ತು ಉಭಯ ಗ್ರಾಮಸ್ಥರಿಂದ ಚೌತಿ ಪ್ರಯುಕ್ತ ವಿಶೇಷ ಭಜನಾ ಸೇವೆ ನಡೆಯಲಿದೆ. ರಾತ್ರಿ ಶ್ರೀಮತಿ ಚೋಮಕ್ಕ ಮತ್ತು ಮಕ್ಕಳು ಕೊಟ್ರಡ್ಕ ಇವರಿಂದ ಚೌತಿ ಪ್ರಯುಕ್ತ ವಿಶೇಷ ಪೂಜೆ, ಬಳಿಕ ಸಾಮೂಹಿಕ ಕಾರ್ತಿಕ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.