ಸುಳ್ಯ ಅಸೋಸಿಯೇಷನ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ಇಂಜಿನಿಯರ್ಸ್ ಡೇ

0

ಇಂಜಿನಿಯರಿಂಗ್ ಎಂಬುದು ಭವಿಷ್ಯಕ್ಕೆ ಭದ್ರ ಬುನಾದಿಯಾಗಿರಬೇಕು.
ಸಂಶೋಧನಾತ್ಮಕ ಕ್ರಿಯೇಟಿವ್ ಮತ್ತು ಆವಿಷ್ಕಾರಇರಬೇಕು- ಡಾ.ಎನ್.ಎ.ಜ್ಞಾನೇಶ್

ಇಂಜಿನಿಯರಿಂಗ್ ಎಂಬುದು ಭವಿಷ್ಯಕ್ಕೆ ಭದ್ರ ಬುನಾದಿಯಾಗಿರಬೇಕು. ಇಂಜಿನಿಯರ್ ಆಗಿರುವ ವ್ಯಕ್ತಿಯು ಸಮಸ್ಯೆಯ ಬಗ್ಗೆ ಅರಿತುಕೊಂಡು ಕೆಲಸ ನಿರ್ವಹಿಸಬೇಕು. ಸಂಶೋಧನಾತ್ಮಕ ಕ್ರಿಯೇಟಿವ್ ಮತ್ತು ಹೊಸತನದ ಆವಿಷ್ಕಾರದ ಬಗ್ಗೆ ಆಸಕ್ತಿ ವಹಿಸಿ ಅನುಷ್ಠಾನಗೊಳಿಸಬೇಕು ಎಂದುಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎನ್.ಜ್ಞಾನೇಶ್ ರವರು ಹೇಳಿದರು. ಸುಳ್ಯದಲ್ಲಿ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ರವರ ವತಿಯಿಂದ ಸೆ.15 ರಂದು ಸುಳ್ಯದ ವರ್ತಕರ ಭವನದಲ್ಲಿ ನಡೆದ ಇಂಜಿನಿಯರ್ಸ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಇಂಜಿನಿಯರ್ ಸರ್‌.ಎಂ.ವಿಶ್ವೇಶ್ವರಯ್ಯ ರವರು ಅದ್ಭುತವಾದ ಬುದ್ದಿವಂತರಾಗಿದ್ದುಕೊಂಡು ವಿದೇಶದಿಂದ ಅವರ ಬ್ರೈನಿಗೆ ಬಹು ಬೇಡಿಕೆ ಇತ್ತು. ಸಮಯ ಪಾಲನೆ ಹಾಗೂ ಶುಭ್ರತೆ ವಿಶ್ವೇಶ್ವ ರಯ್ಯರವರು ಜೀವನದಲ್ಲಿ ಪಾಲಿಸಿಕೊಂಡು ಬಂದವರು.ಅವರ ಆದರ್ಶಯುತ ಜೀವನವನ್ನು ಅನುಸರಿಸಿಕೊಂಡು ಇಂಜಿನಿಯರ್ಸ್ ಆಗಿರುವ ಎಲ್ಲರೂ ಮುಂದುವರಿದರೆ ತನ್ನ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಿದೆ ಎಂದು ಅವರು ಕಿವಿ ಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ನ ಅಧ್ಯಕ್ಷ ಇಂಜಿನಿಯರ್ ಶ್ಯಾಮ್ ಪ್ರಸಾದ್ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಇಂಜಿನಿಯರ್ ಸುಮಿತ್ರ , ಇಂಜಿನಿಯರ್ ಸೂರ್ಯ ರೈ ಸುಳ್ಯ, ನಿಕಟ ಪೂರ್ವ ಅಧ್ಯಕ್ಷಪ್ರಸಾದ್ಎಂ.ಎಸ್, ಕಾರ್ಯದರ್ಶಿ ನವನೀತ್ ರೈ, ಖಜಾಂಜಿ ಜೋಮೋನ್ ಸುಳ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಇಂಜಿನಿಯರ್ ಸೂರ್ಯ ರೈ ಯವರನ್ನು ಸನ್ಮಾನಿಸಲಾಯಿತು. ಕೆ.ವಿ.ಜಿ ಇಂಜಿನಿಯರ್ ವಿದ್ಯಾರ್ಥಿಗಳಾದ ಅಬ್ದುಲ್ಲ ಮನವರಳ್ಳಿ ಮತ್ತು ಅಪೇಕ್ಷ ಎಂ.ಪಿ ಯವರನ್ನು ಪುರಸ್ಕರಿಸಲಾಯಿತು. ಇಂಜಿನಿಯರ್ ಕೃಷ್ಣ ರಾಜ್ ಕೇರ್ಪಳ ಪ್ರಾರ್ಥಿಸಿದರು. ಇಂಜಿನಿಯರ್ ಶಾಕೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಇಂಜಿನಿಯರ್ ನವನೀತ್ ರೈ ವಂದಿಸಿದರು. ಇಂಜಿನಿಯರ್ ಗಿರೀಶ್ ನಾರ್ಕೋಡು ಕಾರ್ಯಕ್ರಮ ನಿರೂಪಿಸಿದರು.