ಚೊಕ್ಕಾಡಿ ಸೊಸೈಟಿ : ದೊಡ್ಡಡ್ಕ ಅಚ್ಚುತ ಗೌಡರಿಗೆ ವಿದಾಯ ಸನ್ಮಾನ

0

ಚೊಕ್ಕಾಡಿ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದಲ್ಲಿ 42 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ದೊಡ್ಡಡ್ಕ ಅಚ್ಚುತ ಗೌಡರಿಗೆ ವಿದಾಯ ಹಾಗೂ ಸನ್ಮಾನ ಕಾರ್ಯಕ್ರಮ ಸೆ.16 ರಂದು ಸೊಸೈಟಿ ಮಹಾಸಭೆಯ ಸಂದರ್ಭ ಏರ್ಪಡಿಸಲಾಯಿತು. ಸೊಸೈಟಿಯ ಮಾಜಿ ಅಧ್ಯಕ್ಷ ಎಂ.ಜಿ.ಸತ್ಯನಾರಾಯಣರು ಅಚ್ಚುತ ಗೌಡ ದಂಪತಿಯನ್ನು ಸನ್ಮಾನಿಸಿದರು.

ಕುಕ್ಕುಜಡ್ಕ ಹಾಲು ಸೊಸೈಟಿ ಅಧ್ಯಕ್ಷ ತಿರುಮಲೇಶ್ವರ ಕುಡುಂಬಿಲ ಅಭಿನಂದನಾ ಭಾಷಣ ಮಾಡಿದರು.
ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್ ಪೊಯ್ಯೆಮಜಲು, ನಿರ್ದೇಶಕ ರಾಧಾಕೃಷ್ಣ ಬೊಳ್ಳೂರು, ಸನ್ಮಾನಿಸಿದ ಎಂ.ಜಿ.ಸತ್ಯನಾರಾಯಣ, ಮಾಜಿ ಅಧ್ಯಕ್ಷ ಕೋಡ್ತುಗುಳಿ ಕೃಷ್ಣಪ್ಪ ಗೌಡ, ಗ್ರಾ.ಪಂ.ಸದಸ್ಯ ಕೃಷ್ಣಪ್ರಸಾದ್ ಮಾಡಬಾಕಿಲು ಅಭಿನಂದಿಸಿ ಮಾತನಾಡಿದರು.


ಸನ್ಮಾನಿತರು ಅಚ್ಚುತ ಗೌಡರು, ತಮ್ಮ 42 ವರ್ಷಗಳ ಸೇವೆಯ ಅನುಭವವನ್ನು ಹೇಳಿಕೊಂಡು ಕೃತಜ್ಞತೆ ಸಮರ್ಪಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಕೇಶವ ಕರ್ಮಜೆಯವರು ಅಚ್ಚುತ ಗೌಡರ ಸೇವೆಯನ್ನು ಕೊಂಡಾಡಿದರು. ಸೊಸೈಟಿ ಉಪಾಧ್ಯಕ್ಷ ಪ್ರವೀಣ್ ಎಸ್.ರಾವ್ ವಂದಿಸಿದರು.