ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪೂರ್ವಭಾವಿ ಸಭೆ

0

ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದಂತೆ ನವರಾತ್ರಿ ಉತ್ಸವ ನಡೆಯಲಿರುವುದು. ಅದರ ಅಂಗವಾಗಿ ಸೆ.15 ರಂದು ದೇವಸ್ಥಾನದ ಸಭಾಂಗಣದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲುರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಪ್ರತಿ ಮನೆಗೆ ಆಮಂತ್ರಣ ಮುಟ್ಟಿಸುವುದು, ವೈಧಿಕ ಕಾರ್ಯಕ್ರಮ, ಅನ್ನದಾನ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮ, ಸ್ವಚ್ಛತೆಗೆ ವಿಶೇಷ ಕಾಳಜಿ, ಭಕ್ತಾದಿಗಳನ್ನು ಬರಮಾಡಿಕೊಳ್ಳುವುದು ಸಭೆಯ ಅಜೆಂಡವಾಗಿತ್ತು.

ವ್ಯವಸ್ಥಾಪನ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ, ಯೋಗಾನಂದ, ವಾರಿಜಾಕ್ಷಿ ಕೇರ್ಪಡ, ನಾಗೇಶ್ ಆಳ್ವ, ರೂಪರಾಜ ರೈ, ಅರ್ಚಕರಾದ ಶ್ರೀಹರಿ ಕುಂಜೂರಾಯ, ತಾರಾನಾಥ ಕರಿಂಬಿಲ, ಗಂಗಾಧರ ಪಂಡಿತ್, ಸುಂದರ ಗೌಡ ಆರೆಂಬಿ, ಚೆನ್ನಪ್ಪ ಗೌಡ, ಚಂದ್ರಶೇಖರ, ಭುವನೇಶ್ವರ ಪೂದೆ, ದಿನೇಶ್ ಕೆ, ದೀಪಕ್ ರೈ, ಅವಿನಾಶ್ ಪಿ, ದೀಪಕ್ ಕೆ.ಸಿ, ಸೀತಾರಾಮ ಗೌಡ ನಾರ್ಣಕಜೆ, ಗೀತಾ ಮೇದಪ್ಪ ಕೇರ್ಪಡ, ವೇದಾವತಿ ನೂಜಾಡಿ, ಬಾಬು ಪೂಜಾರಿ ನೂಜಾಡಿ, ವಸಂತಿ ಕೇರ್ಪಡ, ಯಶೋಧ ಕರಿಂಬಿಲ, ಜಾನಕಿ ಮುರುಳ್ಯ, ರೇವತಿ ಎಂಜೀರು, ವೀಣಾ.ಕೆ, ಮಹಾಬಲ ರೈ, ಬಾಲಕೃಷ್ಣ ಗೌಡ ಕರಿಂಬಿಲ, ದಿನೇಶ್ ನಡುಬೈಲು, ದೀಕ್ಷಿತ್ ರೈ ಕಳತ್ತಜೆ, ಕೀರ್ತನ್ ಬಿ., ಜ್ಞಾನೇಶ್ ನಡುಬೈಲು, ಗಿರೀಶ್ ಕೆ.ಎಂ., ಪ್ರದೀಪ್ ರೈ ಎಣ್ಮೂರು, ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ ಉಪಸ್ಥಿತರಿದ್ದರು.

ಸೆ.19ರಂದು ಗಣೇಶ ಚೌತಿಯ ದಿನದಂದು ದೇವಸ್ಥಾನದಲ್ಲಿ ವಿಶೇಷ ಪೂಜೆ, ಗಣಪತಿ ಹವನ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ತಿಳಿಸಿದ್ದಾರೆ.