ಉನ್ನತ ವ್ಯಾಸಂಗಕ್ಕಾಗಿ ಸಚಿನ್ ಮಳಿ ವಿದೇಶಕ್ಕೆ

0

ಕನಕಮಜಲು ಗ್ರಾಮದ ಸಚಿನ್ ಮಳಿಯವರು ಉನ್ನತ ವ್ಯಾಸಂಗಕ್ಕಾಗಿ ಸೆ.೧೪ ರಂದು ಅಮೇರಿಕಾದ ಕ್ಯಾಲಿಫೋರ್ನಿಯಕ್ಕೆ ತೆರಳಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಸುಳ್ಯದ ರೋಟರಿ ಶಿಕ್ಷಣ ಸಂಸ್ಥೆ, ಪ್ರೌಢಶಿಕ್ಷಣವನ್ನು ಕೆವಿಜಿ ಹೈಸ್ಕೂಲ್‌ನಲ್ಲಿ ಪೂರೈಸಿದ ಸಚಿನ್‌ರವರು ಪದವಿ ಪೂರ್ವ ಶಿಕ್ಷಣವನ್ನು ಸುಳ್ಯದ ಎನ್‌ಎಂಪಿಯುಸಿಯಲ್ಲಿ ಪಡೆದಿರುತ್ತಾರೆ. ನಂತರ ಪಿಸಿಯೋಥೆರಪಿ ಪದವಿಯನ್ನು ಮಂಗಳೂರಿನ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ಪಡೆದ ಇವರು, ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನ ಕಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಪಡೆದಿರುತ್ತಾರೆ.

ಇದೀಗ ಪಿಸಿಯೋಥೆರಪಿ ವಿಭಾಗದಲ್ಲಿ ಉನ್ನತ ವ್ಯಾಸಂಗಕ್ಕಾಗಿ (DOCTORATE PROGRAM) ಅಮೇರಿಕಾದ ಕ್ಯಾಲಿಫೋರ್ನಿಯಕ್ಕೆ ತೆರಳಿದ್ದಾರೆ.
ಇವರು ಕನಕಮಜಲು ಗ್ರಾಮದ ಮಳಿ ವೆಂಕಟ್ರಮಣ ಮತ್ತು ದಿ.ರೇಣುಕಾ ದಂಪತಿಯ ಪುತ್ರ. ಸಚಿನ್‌ರವರ ಪತ್ನಿ ಶ್ರೀಮತಿ ಅಶ್ಮಿ ಸಚಿನ್ ಮಳಿಯವರು ಅಮೇರಿಕಾದ ಬೊಸ್ಟನ್‌ನಲ್ಲಿ ಎಂ.ಎಸ್. ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ.