ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘ ಅಲೆಕ್ಕಾಡಿ 38ನೇ ವಾರ್ಷಿಕ ಸಾಮಾನ್ಯ ಸಭೆ

0

ಮುರುಳ್ಯ ಹಾಲು ಉತ್ಪಾದಕರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಕೇರ್ಪಡೆ ಶ್ರೀಮಂತೀನಿ ದೇವಸ್ಥಾನದ ಸಭಾಂಗಣದಲ್ಲಿ ಸೆ.15ರಂದು ಸಂಘದ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಸಕ್ತ ಸಾಲಿನಲ್ಲಿ ಸಂಘದ ಹೈನುಗಾರ ಸದಸ್ಯರ ಪ್ರೋತ್ಸಾಹದಿಂದ 8 ಲಕ್ಷದ 85ಸಾವಿರ 987 ರೂ. 71 ಪೈಸೆ ಲಾಭಗಳಿಸಿದೆಯೆಂದು ಅಧ್ಯಕ್ಷರು ಭಾಷಣದಲ್ಲಿ ಘೋಷಿಸಿದರು.

ಈ ಸಂದರ್ಭದಲ್ಲಿ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ, ಸಹಕಾರರತ್ನ ಪ್ರಶಸ್ತಿ ಪುರಸ್ಕೃತ ನಿತ್ಯಾನಂದ ಮುಂಡೋಡಿ, ಮಂಗಳೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ.ರೈ, ವಿಸ್ತರಣಾಧಿಕಾರಿ ಹರೀಶ್ ಕುಮಾರ್, ಉಪವ್ಯವಸ್ಥಾಪಕರಾದ ಸತೀಶ್ ರಾವ್, ಪಶು ವೈದ್ಯಾಧಿಕಾರಿ ಸಚಿನ್ ಕುಮಾರ್ ಎಸ್.ಎನ್. ರವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಸಂಘದ ಸದಸ್ಯರ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಗಳಿಸಿದವರನ್ನು ಗುರುತಿಸಿ ಧನಸಹಾಯ ನೀಡಿ ಪುರಸ್ಕರಿಸಲಾಯಿತು.

ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಪ್ರಥಮ ಶೂರಪ್ಪ ಗೌಡ.ಎ, ದ್ವಿತೀಯ ಉದಯಕುಮಾರ್ ರೈ ಕುಕ್ಕುಮಜಲು, ತೃತೀಯ ಜಗನ್ನಾಥ ಪೂಜಾರಿ ಮುಕ್ಕೂರು ಬಹುಮಾನ ಪಡೆದರು. ಉಳಿದ ಸದಸ್ಯರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಸೀತಾರಾಮ ಗೌಡ, ಸದಸ್ಯರಾದ ಜಗನ್ನಾಥ ಪೂಜಾರಿ ಮುಕ್ಕೂರು, ಜನಾರ್ಧನ ಪೂಜಾರಿ, ಶೂರಪ್ಪ ಗೌಡ, ಬಾಲಕೃಷ್ಣ ಗೌಡ, ಹಿಮಕರ ರೈ, ಭುವನೇಶ್ವರ. ಪಿ, ಚೋಮ, ಶ್ರೀಮತಿ ಚಂದ್ರಪ್ರಭಾ, ಶ್ರೀಮತಿ ಪ್ರೇಮಲತಾ ರೈ, ಶ್ರೀಮತಿ ಲೀಲಾವತಿ.ಪಿ.ಆರ್. ಉಪಸ್ಥಿತರಿದ್ದರು. ಪ್ರದೀಪ್ ರೈ ಎಣ್ಮೂರು ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಗೌಡ ಸ್ವಾಗತಿಸಿದರು.

ಕಾರ್ಯದರ್ಶಿ ಶ್ರೀಮತಿ ಅಕ್ಷತಾ.ಎ ವರದಿ ವಾಚಿಸಿದರು. ಸಿಬ್ಬಂದಿಗಳಾದ ಸುಂದರ.ಎ, ಜಸ್ಮನ್, ಲಕ್ಷ್ಮೀಶ.ಕೆ ಶ್ರೀಮತಿ ಶೀಲಾವತಿ, ವಿಶ್ವನಾಥ ಸಹಕರಿಸಿದರು. ಭುವನೇಶ್ವರ ಪೂದೆ ವಂದಿಸಿದರು.

ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ
ಪೋಟೋ : ಮಿಂಚು ಸ್ಟುಡಿಯೋ