ಕುಂ..ಕುಂ.. ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ 151 ದಿನ ಬಿಗ್ ಫೆಸ್ಟಿವಲ್ ಸೇಲ್

0


ಸ್ಕ್ರಾಚ್ ಕಾರ್ಡ್‌ನಲ್ಲಿ 30 ಸಾವಿರಕ್ಕೂ ಅಧಿಕ ಬಹುಮಾನ ಗೆಲ್ಲುವ ಅವಕಾಶ

ಸುಳ್ಯದ ಹೆಸರಾಂತ ವಸ್ತ್ರ ಮಳಿಗೆಯ ಕುಂ..ಕುಂ.. ಫ್ಯಾಷನ್‌ನಲ್ಲಿ ೧೫೧ ದಿನಗಳ ಬಿಗ್ ಫೆಸ್ಟಿವಲ್ ಸೀಸನ್ ಸೇಲ್ ಆರಂಭಗೊಂಡಿದೆ. ಇದರಲ್ಲಿ ವಸ್ತ್ರ ಖರೀದಿಸುವ ಗ್ರಾಹಕರಿಗಾಗಿ ಸ್ಕ್ರಾಚ್ ಕಾರ್ಡ್‌ನ್ನು ಆಯೋಜಿಸಲಾಗಿದ್ದು ಸುಮಾರು ೩೦ ಸಾವಿರಕ್ಕೂ ಮಿಕ್ಕಿ ಬಹುಮಾನವನ್ನು ನೀಡಲಾಗುತ್ತಿದೆ. ರೂ.೧೦೦೦ ಮೇಲಿನ ವಸ್ತ್ರ ಖರೀದಿಗೆ ಟಿ.ವಿ., ಫ್ರಿಜ್, ವಾಷಿಂಗ್ ಮೆಷಿನ್, ಗ್ರೇಂಡರ್, ಮಿಕ್ಸಿ ಸಹಿತ ಹಲವು ಬಹುಮಾನಗಳು ಹಾಗೂ ೨೫೦೦ ಮೇಲಿನ ಖರೀದಿಗೆ ಹೆಚ್ಚುವರಿಯಾಗಿ ಸ್ಕೂಟ್ ಹಾಗೂ ಬೈಕ್ ಕೂಡಾ ಸೇರಿವೆ. ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಫೆಸ್ಟಿವಲ್ ಸೀಸನ್ ಸೇಲ್‌ಗಾಗಿ ಹೊಸ ಹೊಸ ವಸ್ತ್ರಗಳ ಸಂಗ್ರಹವನ್ನು ತರಲಾಗಿದೆ. ಅಲ್ಲದೆ, ಮದುವೆ ವಸ್ತ್ರಗಳ ವಿಶೇಷ ಮಳಿಗೆಯಾಗಿಯೂ ಕುಂ..ಕುಂ.. ಸಂಸ್ಥೆ ಗುರುತಿಸಿಕೊಂಡಿದೆ. ಇಲ್ಲಿ ಮಕ್ಕಳ, ಪುರುಷರ, ಮಹಿಳೆಯರ ಎಲ್ಲ ತರಹದ ಉಡುಪುಗಳೊಂದಿಗೆ, ಪೂಜಾ ವಸ್ತ್ರಗಳು ಕೂಡಾ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.