ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಟ್ಟಡ ಮತ್ತು ಇತರೆ ನಿರ್ಮಾಣ ಫೆಡರೇಶನ್ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ

0

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸುಳ್ಯ ತಾಲೂಕು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣದ ಕಾರ್ಮಿಕರ ಫೆಡರೇಶನ್ (ಸಿ ಐ ಟಿ ಯು) ವತಿಯಿಂದ ಸುಳ್ಯದ ಕಾರ್ಮಿಕ ಇಲಾಖೆ ಕಚೇರಿಯ ಮುಂಭಾಗ ಸೆಪ್ಟೆಂಬರ್ ಬಂದು ಬೃಹತ್ ಪ್ರತಿಭಟನೆ ನಡೆಯಿತು.

ಫೆಡರೇಶನ್ ಜಿಲ್ಲಾಧ್ಯಕ್ಷ ವಸಂತ ಆಚಾರಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಸರಕಾರದಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡದೆ ಸತಾಯಿಸುತ್ತಿದ್ದು ಸಹಾಯಧನವನ್ನು ಅತಿ ಶೀಘ್ರವಾಗಿ ಬಿಡುಗಡೆಗೊಳಿಸ ಬೇಕೆಂದು ಆಗ್ರಹಿಸಿದರು. 2023. 24 ನೇ ಸಾಲಿನ ಶೈಕ್ಷಣಿಕ ವರ್ಷ ಈಗಾಗಲೇ ಐದಾರು ತಿಂಗಳು ಕಳೆದಿದ್ದು ಕಳೆದ ಸಾಲಿನ 1.5 ಲಕ್ಷ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ಬಾಕಿ ಇರಿಸಿಕೊಂಡಿದ್ದು ಕೂಡಲೇ ನೂತನ ಸಾಲಿನ ಅರ್ಜಿ ಆಹ್ವಾನ ಮಾಡುವಂತೆ ಒತ್ತಾಯಿಸಿದರು.

ಸಂಘಟನೆಯ ತಾಲೂಕು ಸಮಿತಿ ಅಧ್ಯಕ್ಷ ವಿಶ್ವನಾಥ ನೆಲ್ಲಿಬಂಗಾರಡ್ಕ, ಪ್ರಧಾನ ಕಾರ್ಯದರ್ಶಿ ಕೆ ಪಿ ರಾಬರ್ಟ್ ಡಿಸೋಜ, ವಸಂತಗೌಡ ಪೆಲ್ತಡ್ಕ, ರಾಜ್ಯ ಸಮಿತಿ ಸದಸ್ಯ ಬಿಜು ಅಗಸ್ಟಿನ್, ಸಂಘಟನೆಯ ಮುಖಂಡರುಗಳಾದ ಆನಂದ ಗೌಡ, ಶಿವರಾಮ ಗೌಡ, ಗಣೇಶ ಕೊಡಿಯಾಲ ಬೈಲು, ಶ್ರೀಧರ ಕಡೆಪಾಲ, ಪ್ರಮೀಳಾ ಪೆಲ್ತಡ್ಕ, ವಿಜಯ ಮಾಲತೇಶ್, ವೆಂಕಟೇಶ್ ನಾನಿ ಸೇರಿದಂತೆ ವಿವಿಧ ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಳಿಕ ತಮ್ಮ ಬೇಡಿಕೆಯ ಮನವಿಯನ್ನು ಸುಳ್ಯ ಕಚೇರಿಯಲ್ಲಿ ನೀಡಲು ಮುಂದಾದಾಗ ಅಧಿಕಾರಿ ಇಲ್ಲದ ಹಿನ್ನೆಲೆಯಲ್ಲಿ ಸಂಘಟನೆ ಯ ಮುಖಂಡರು ಪುತ್ತೂರಿಗೆ ತೆರಳಿ ತಮ್ಮ ಮನವಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡಿರುತ್ತಾರೆ ಎಂದು ತಿಳಿದುಬಂದಿದೆ.