ಹರಿಹರ ಪಲ್ಲತಡ್ಕ:ಹಿರಿಯ ವೈದ್ಯ ಡಾ.ಚಂದ್ರಶೇಖರ ಕಿರಿಭಾಗರಿಗೆ ‘ಗಾಂಧಿ ಸ್ಮೃತಿ ಪ್ರಶಸ್ತಿ” ಪ್ರದಾನ ಕಾರ್ಯಕ್ರಮ

0

ಪೂರ್ಣ ಕುಂಭ, ವಾಹನ ಜಾಥದೊಂದಿಗೆ ಸ್ವಾಗತ

ಗಾಂಧಿ ಜಯಂತಿ ಪ್ರಯುಕ್ತ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಹಾಗೂ ಸುಳ್ಯದ ಯುವಜನ ಸೇವಾ ಸಂಸ್ಥೆ ಕೊಡ ಮಾಡುವ ಗಾಂಧಿ ಸ್ಮೃತಿ ಪ್ರಶಸ್ತಿ ಗೆ ಖ್ಯಾತ ವೈದ್ಯ, ಹರಿಹರಪಲ್ಲತಡ್ಕದ ಡಾ.ಚಂದ್ರಶೇಖರ ಕಿರಿಭಾಗರು ಭಾಜನರಾಗಿದ್ದು, ಅ.7ರಂದು ಹರಿಹರಪಲ್ಲತಡ್ಕದ ಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಮೆರವಣಿಗೆಯ ಮೊದಲಿಗೆ ಎ ಕೆ ಹಿಮಕರ ಗುತ್ತಿಗಾರ ಇವರು ರಚಿಸಿದ ಜನಸ್ನೇಹಿ ವೈದ್ಯ ಡಾ.ಚಂದ್ರಶೇಖರ ಕಿರಿಭಾಗ ಎಂಬ ಕೃತಿ ಬಿಡುಗಡೆ ನಡೆಸಿ ಮೆರವಣಿಗೆ ಗೆ ಚಾಲನೆ ನೀಡಿದರು. ಹರಿಹರ ಮುಖ್ಯ ಪೇಟೆಯಿಂದ ಹರಿಹರೇಶ್ವರ ದೇವಸ್ಥಾನದ ಸಬಾ ಭವನದ ವರೆಗೆ ಪ್ರಶಸ್ತಿ ಪುರಸ್ಕೃತರನ್ನು ನಾಸಿಕ್ ಬ್ಯಾಂಡ್, ಗೊಂಬೆ ಕುಣಿತ, ಪೂರ್ಣ ಕುಂಭ ಸ್ವಾಗತದೊಂದಿಗೆ,ವಾಹನ ಜಾಥದೊಂದಿಗೆ ತೆರೆದ ವಾಹನದಲ್ಲಿ ಸಚಿನ್ ಕ್ರೀಡಾ ಸಂಘ ಹಾಗು ನಾಗರಿಕರು ಮೆರವಣಿಗೆಯಲ್ಲಿ ಕರೆತಂದರು.