ಅರಂತೋಡು : ಸರಣಿ ಅಪಘಾತ

0


ಮಾಣಿ ಮೈಸೂರು ಹೆದ್ದಾರಿಯ ಅಂರತೋಡಿನ ಬಿಳಿಯಾರಿನಲ್ಲಿ ಲಾರಿ ಮತ್ತು ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.

ಸುಳ್ಯ ಕಡೆಯಿಂದ ಮೈಸೂರಿಗೆ ಹೋಗುತ್ತಿದ್ದ ಲಾರಿ ಬಿಳಯಾರು ಸಮೀಪ ಮಡಿಕೇರಿ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯಿತು. ಈ ಸಂದರ್ಭ ಕಾರಿಗೆ ಸಡನ್ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಅದಕ್ಕೆ ಡಿಕ್ಕಿ ಹೊಡೆಯಿತು. ಘಟನೆಯಿಂದ ಕಾರಿನ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎರಡೂ ಕಾರುಗಳು ಜಖಂಗೊಂಡಿದೆ . ಅಪಘಾತವಾಗಿರುವ ಕಾರುಗಳು ಒಂದು ಮಂಗಳೂರಿನವರದ್ದಾಗಿದ್ದು, ಇನ್ನೊಂದು ಸುಳ್ಯ ನಿವಾಸಿಗಳದ್ದೆಂದು ತಿಳಿದು ಬಂದಿದೆ.