ಸುದ್ದಿ ಸಂಸ್ಥೆ ಹಮ್ಮಿಕೊಂಡಿರುವ ಮಳೆ ಕೊಯ್ಲು ಯೋಜನೆಯ ಜನಜಾಗೃತಿ ಅಭಿಯಾನ

0

ಸುಳ್ಯದಲ್ಲಿ ಮಳೆ ಕೊಯ್ಲು ಪ್ರಾತ್ಯಕ್ಷಿಕೆ ವಾಹನದ ಮೂಲಕ ಸಾರ್ವಜನಿಕರಿಗೆ ಮಾಹಿತಿ

ಸುದ್ದಿ ಸಮೂಹ ಸಂಸ್ಥೆ ಹಮ್ಮಿಕೊಂಡಿರುವ ಮಳೆ ಕೊಯ್ಲು ಯೋಜನೆಯ ಜನಜಾಗೃತಿ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 28 ರಂದು ಸುಳ್ಯ ಪೇಟೆಯಲ್ಲಿ ಮಳೆ ಕೊಯ್ಲು ಯೋಜನೆಯ ಪ್ರಾತ್ಯಕ್ಷಿಕೆ ವಾಹನ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಳೆ ಕೊಯ್ಲು ಯೋಜನೆಯ ಬಗ್ಗೆ ಸ್ಪಷ್ಟವಾಗಿ ತಿಳಿಯಲು ವಾಹನದಲ್ಲಿ ನೂತನ ತಂತ್ರಜ್ಞಾನದ ಮೂಲಕ ವಿನ್ಯಾಸಗೊಳಿಸಲಾಗಿದ್ದ ಪ್ರಾತ್ಯಕ್ಷಿಕೆ ಮನೆ ಮತ್ತು ಅದರ ಮೇಲ್ಚಾವಣಿಯಿಂದ ಮಳೆಯ ನೀರು ಅರಿದು ಬರುವ ದೃಶ್ಯ, ನೀರನ್ನು ಶುದ್ಧೀಕರಿಸುವ ಯಂತ್ರ,ನೀರನ್ನು ಶೇಖರಣೆ ಮಾಡುವ ವಿಧಾನವನ್ನು ಮನಮುಟ್ಟುವಂತೆ ರೂಪಿಸಲಾಗಿತ್ತು.


ಅಲ್ಲದೆ ಈ ವಾಹನದಲ್ಲಿ ಕೃತಕ ಬಾವಿ, ಕೊಳವೆಬಾವಿ,ನೀರಿನ ಟ್ಯಾಂಕ್ ಗಳನ್ನು ನಿರ್ಮಿಸಿ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸುವ,ಮತ್ತು ಇಂಗಿಸುವ ವಿಧಾನಗಳ ಬಗೆಯೂ ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ದೊರಕುವಂತೆ ವಿನ್ಯಾಸ ಗೊಳಿಸಲಾಗಿತ್ತು.ಟಿವಿ ಪರದೆಯನ್ನು ಅಳವಡಿಸಿ ನೀರು ಶುದ್ಧೀಕರಿಸುವ ಯಂತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಯಿತು.

ಗಾಂಧಿನಗರ, ಖಾಸಗಿ ಬಸ್ಸು ನಿಲ್ದಾಣ, ಬಾಳೆ ಮಕ್ಕಿ, ಸುದ್ದಿ ಕೃಷಿ ಕೇಂದ್ರದ ಮುಂತಾದ ಕಡೆಗಳಲ್ಲಿ ವಾಹನವನ್ನು ನಿಲ್ಲಿಸಿ ಸಾರ್ವಜನಿಕರಿಗೆ ಮಳೆ ಕೊಯ್ಲು ಯೋಜನೆಯ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ವ್ಯಾಪಾರಸ್ಥರು, ಸಾರ್ವಜನಿಕರು,ಆಟೋ ಚಾಲಕರು ವಾಹನದ ಬಳಿ ದಾವಿಸಿ ಮಳೆ ಕೊಯ್ಲು ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.ಯೋಜನೆಯ ಬಗ್ಗೆ ಸುದ್ದಿ ಸಂಸ್ಥೆಯ ಸಿಬ್ಬಂದಿಗಳಾದ ಹಸೈನಾರ್ ಜಯನಗರ,ಕುಶಾಲಪ್ಪ,ರಮ್ಯಾ ಸೂಂತೋಡು ಮಾಹಿತಿ ನೀಡಿದರು.