ಸುಳ್ಯ ಹಳೆಗೇಟಿನ ಮರದ ಮಿಲ್ ಗೆ ಅರಣ್ಯ ಅಧಿಕಾರಿಗಳ ದಾಳಿ

0

ಸುಳ್ಯದ ಮರದ ಮಿಲ್ ವೊಂದರ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿರುವ ಘಟನೆ ಇಂದು ಸಂಜೆ ನಡೆದಿದೆ.

ಹಳೆಗೇಟಿನಲ್ಲಿರುವ ಖಲಿದಿಯಾ ಎಂಬ ಮರದ ಮಿಲ್ ನಲ್ಲಿ ಮರಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂದು ದೂರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಮದ್ ಅವರ ಮಿಲ್ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.