ಪಂಜದಲ್ಲಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ

0

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಮೂರುಮತ್ತುಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಡ್ಕ ಇವರ ಜಂಟಿ ಆಶ್ರಯದಲ್ಲಿ ಪಂಜ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ
ಕೋಟಿ ಚೆನ್ನಯ ಕ್ರೀಡಾಂಗಣ ಪಂಜದಲ್ಲಿ ನಡೆಯಿತು.


ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಬಹುಮಾನ ಗಳಿಸುದಕ್ಕಿಂತಲೂ ಭಾಗವಹಿಸುವಿಕೆ ಮುಖ್ಯ ಸಿಗುವ ಅವಕಾಶವನ್ನು ನಾವು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತೇವೆಯೋ ಅದು ನಮ್ಮನ್ನು ಯಶಸ್ವಿಗೆ ಕೊಂಡೊಯ್ಯುತ್ತದೆ ಎಂದು ಶುಭ ಹಾರೈಸಿದರು.
ಎಡಮಂಗಲ ಗ್ರಾ.ಪಂ ಅಧ್ಯಕ್ಷ ರಾಮಣ್ಣ ಜಾಲ್ತಾರು ಧ್ವಜಾರೋಹಣ ನೆರವೇರಿಸಿದರು. ಕಲ್ಮಡ್ಕ ಗ್ರಾ.ಪಂ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಅಧ್ಯಕ್ಷತೆ ವಹಿಸಿದ್ದರು ಪಂಜ ಗ್ರಾ.ಪಂ ಅಧ್ಯಕ್ಷಿ ಶ್ರೀಮತಿ ವಿಜಯಲಕ್ಷ್ಮಿ ಮುಖ್ಯ ಅತಿಥಿಯಾಗಿದ್ದರು. ಎಣ್ಮೂರು ಶಾಲಾ ಎಸ್ ಡಿಯಂ ಸಿ ಅಧ್ಯಕ್ಷ ಅಬ್ದುಲ್ ಶರೀಫ್ ಕಲ್ಮಡ್ಕ ಶಾಲಾ ಎಸ್ ಡಿಯಂಸಿ ಅಧ್ಯಕ್ಷ ಹರೀಶ್ ಜಿ , ಪಂಜ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಪ್ಪ ಗೌಡ, ಪಂಜ ಪ್ರೌಢ ಶಾಲಾ ಮುಖ್ಯಶಿಕ್ಷಕ ಟೈಟಸ್ ವರ್ಗೀಸ್, ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿ ವೀಕ್ಷಕ ಸೂಫಿ ಪೆರಾಜೆ, ಪಂಜ ಶಾಲೆಯ ದೈಹಿಕ ಶಿಕ್ಷಕ ಯೋಗಿಶ್, ಪಂಜ ವಲಯದ ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ ಕುಮಾರಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನ ಕಾರ್ಯದರ್ಶಿ ಸರೋಜಿನಿ ಉಪಸ್ಥಿತರಿದ್ದರು.ಸೂಫಿ ಪೆರಾಜೆ ಪ್ರಾಸ್ತಾವಿಕ ಮಾತುಗಳನ್ನುಡಿದರು ಎಣ್ಮೂರು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಭುವನೇಶ್ವರಿ.ಕೆ ಎಲ್ಲರನ್ನೂ ಸ್ವಾಗತಿಸಿದರು ಕಲ್ಮಡ್ಕ ಶಾಲೆಯ ಮುಖ್ಯಶಿಕ್ಷಕಿ ವಜ್ರಾಕ್ಷಿ ವಾದಿಸಿದರು ಪಂಜ ಪ್ರೌಢಶಾಲಾ ಶಿಕ್ಷಕ ಪುರಂದರ ಕಾರ್ಯಕ್ರಮ ನಿರೂಪಿಸಿದರು.