ಸುದ್ದಿ ಚಾನೆಲ್‌ನಲ್ಲಿ ಕಾರ್ಯಕ್ರಮದ ಸಂಪೂರ್ಣ ನೇರಪ್ರಸಾರ
ಸಂಪಾಜೆ ಗೂನಡ್ಕ – ಬೈಲೆ ” ನಮ್ಮೂರ ಮಿತ್ರ ಬಳಗ” ಆಶ್ರಯದಲ್ಲಿ ಕೆಸರ್‌ಡ್ ಒಂಜಿ ದಿನ -ಆಟಿ ಕ್ರೀಡಾ ಕೂಟ ಕಾರ್ಯಕ್ರಮವು ಬೈಲೆ ಉಳ್ಳಾಕುಲು ಚಾವಡಿ ( ಕುಯಿoತೋಡು ನಾಗೇಶ್ ಗೌಡರ ಗದ್ದೆ ಯಲ್ಲಿ ಜುಲೈ. 10 ರಂದು ಚಾಲನೆಗೊಂಡಿತು.
ಬೈಲೆ ಗೂನಡ್ಕ ಕೆಸರ್‌ಡ್ ಒಂಜಿ ದಿನದ ಗೌರವಾಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಚಾವಡಿಯಲ್ಲಿ ಪ್ರಾರ್ಥಿಸಿ, ಕುಯಿoತೋಡು ಗದ್ದೆಯ ಮಾಲಿಕ ನಾಗೇಶ್ ಗೌಡರು ಚಾವಡಿಯಲ್ಲಿ ದೀಪ ಪ್ರಜ್ವಲನೆಗೆ ಚಾಲನೆ ನೀಡಿದರು. ಬಳಿಕ ಗದ್ದೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಸತೀಶ್ ಕೊಯಿಂಗಾಜೆ ಗದ್ದೆಯಲ್ಲಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ನಿವೃತ್ತ ಮುಖ್ಯಪಾಧ್ಯಾಯರು ಹಾಗೂ ಕೆಸರ್‌ಡ್ ಒಂಜಿ ದಿನ ಆಟಿ ಕೂಟದ ಗೌರವ ಸಲಹೆಗಾರರು ದಾಮೋದರ ಮಾಸ್ತರ್ ತೆಂಗಿನ ಕಾಯಿ ಹೊಡೆಯುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.

















ಈ ಸಂದರ್ಭದಲ್ಲಿ ಕೆಸರ್‌ಡ್ ಒಂಜಿ ದಿನ -ಆಟಿ ಕ್ರೀಡಾ ಕೂಟ ಅಧ್ಯಕ್ಷರು ಜಗದೀಶ್ ಪಿ.ಎಲ್ , ಉಪಾಧ್ಯಕ್ಷರಾದ ಗಣೇಶ್ ಕಾಪಿಲ , ವಿಜಯಾನಂದ ಇರ್ಣೆ , ಮೋಹನ್ ಕುಮಾರ್ ಪಿ.ಯು, ಗೌರವ ಸಲಹೆ ಗಾರ ಕೆ. ಪಿ ಪ್ರಕಾಶ್ ಕುಯಿo ತೋಡು , ರಾಮ ಚಂದ್ರ ಕಲ್ಲು ಗದ್ದೆ , ಧನಜಂಯ ಅಬೀರ , ಕೀರ್ತನ್ ಕಡೆಪಾಲ , ದೀಪಕ್ ಪೇರಡ್ಕ , ಉಲ್ಲಾಸ್ ಮಾವಜಿ , ಗುರು ಪ್ರಸಾದ್ ಬೈಲೆ , ಪ್ರಧಾನ ಕಾರ್ಯದರ್ಶಿ , ಕೆ. ಜಿ ನವೀನ್ ಇರ್ಣೆ , ಜೊತೆ ಕಾರ್ಯದರ್ಶಿ ಜಿ. ಆರ್ ರಂಜನ್ ಕಲ್ಲು ಗದ್ದೆ , ಕೋಶಾಧಿಕಾರಿ ಸನ್ನತ್ ಪಿ. ಎನ್ ಪೆಲ್ತಡ್ಕ , ಸಮಿತಿಯ ಸದಸ್ಯರಾದ ಚಂದ್ರ ಶೇಖರ ಸಂಕೇಶ , ರಾಘವ ಅಬಿರ , ಚಂದ್ರ ಕುಮಾರ್ ಕೆ.ಆರ್ , ವಿಜಯ ಕುಮಾರ್ ಕುಯಿo ತೋಡು , ಆನಂದ ಅಬೀರ , ಪಾಧಾಧಿಕಾರಿಗಳು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಬಳಿಕ ಪುರುಷರಿಗೆ , ಮಹಿಳೆಯರಿಗೆ ,ಮಕ್ಕಳಿಗೆ ವಿವಿಧ ಕ್ರೀಡಾಕೂಟಗಳು ನಡೆಯಿತು. ಕಾರ್ಯಕ್ರಮವನ್ನು ಪ್ರಕಾಶ್ ಮುಳ್ಯ ನಿರೂಪಿಸಿದರು..










