ಕಲ್ಮಡ್ಕ ಸಂಸ್ಕಾರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ, ಊರವರಿಂದ ಕೊಡುಗೆ

0

ಕಲ್ಮಡ್ಕ ಸಂಸ್ಕಾರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ನ. 24ರಂದು ನಡೆಯಿತು. ಈ ಸಂದರ್ಭದಲ್ಲಿ ಊರಿನ ದಾನಿಗಳು ಬೇಬಿ ಡೆಸ್ಕ್, ಬೇಬಿ ಬೆಂಚ್ ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಟಾಣಿ ತೇಜಸ್ವಿನಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಲ್ಮಡ್ಕ ಗ್ರಾ.ಪಂ. ಸದಸ್ಯ ಹರೀಶ್ ಮಾಳಪ್ಪಮಕ್ಕಿ, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ, ಮೇಲ್ವಿಚಾರಕಿ ಶ್ರೀಮತಿ ರವಿಶ್ರೀ, ನಿವೃತ್ತ ಮುಖ್ಯ ಗುರುಗಳಾದ ಸುಬ್ರಾಯ ಓಣಿಯಡ್ಕ, ನವೋದಯ ಸಂಘದ ಅಧ್ಯಕ್ಷ ಶಿವರಾಮ ಬಿ, ಸೌಹಾರ್ದ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಸುಲೋಚನಾ ಎಡಪತ್ಯ, ಬಾಲವಿಕಾಸ ಅಧ್ಯಕ್ಷೆ ಶ್ರೀಮತಿ ವೀಣಾ ಹೆಗಡೆ ಪದ್ಯಾಣ, ಮುಖ್ಯ ಶಿಕ್ಷಕಿ ಶ್ರೀಮತಿ ವಜ್ರಾಕ್ಷಿ ಎಂ, ಪ್ರೊ. ಶಶಿಕಲಾ ದೇವ ರಾಮತ್ತಿಕಾರ್ ಮೈಸೂರು ಮತ್ತು ಆರೋಗ್ಯ ಇಲಾಖೆ ಯ ಸಿ.ಹೆಚ್.ಒ ಅಶ್ವಿನಿ ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಮಕ್ಕಳಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಿ ಗುಂಪಿನ ವತಿಯಿಂದ ಬಹುಮಾನ ವಿತರಿಸಲಾಯಿತು. ವೀಣಾ ಹೆಗಡೆ ಪದ್ಯಾಣ ಸ್ವಾಗತಿಸಿ, ಅಶ್ವಿನಿ ಜೆ ವಂದಿಸಿದರು. ಶ್ರೀನಿವಾಸ ಜೋಗಿಬೆಟ್ಟು ಕಾರ್ಯಕ್ರಮ ನಿರೂಪಿಸಿ ದರು. ಪೋಷಕರು ಮತ್ತು ಸ್ತ್ರೀ ಶಕ್ತಿ ಸದಸ್ಯರು ಸಹಕರಿಸಿ ದರು.