ಇಂದು ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಮತ್ತು ಹಿರಿಯ ವಿದ್ಯಾರ್ಥಿ ಸಂಘ ನಡುಗಲ್ಲು ಹಾಗೂ ಊರ ವಿದ್ಯಾಭಿಮಾನಿಗಳ ಸಹಭಾಗಿತ್ವದಲ್ಲಿ ಇಂದು (ನ.29) ರಂದು
ನಡುಗಲ್ಲು ಸ.ಹಿ.ಪ್ರಾ.ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ.


ಸಂಜೆ 5 ಗಂಟೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ, ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಮಿತ್ರ ಮೂಕಮಲೆ, ಧೀರೇನ್ ಪರಮಲೆ, ವೆಂಕಟ್ ದಂಬೆಕೋಡಿ , ರಮೇಶ ಬಿ, ಶ್ರೀಧರ ಗೌಡ, ವಿಜಯಕುಮಾ‌ರ್ ಚಾರ್ಮತ, ಹರೀಶ್ ಕೊಯಿಲ, ಪ್ರಮೀಳ ಎರ್ದಡ್ಕ, ಲೀಲಾವತಿ ಅಂಜೇರಿ ಇರಲಿದ್ದಾರೆ. ಸನ್ಮಾನ ಸಮಾರಂಭವು ಜರುಗಲಿದೆ. ಸಂಜೆ ಗಂಟೆ 6-30ರಿಂದ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ, ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.

ವಾರ್ಷಿಕೋತ್ಸವ ಕಾರ್ಯಕ್ರಮ ಸುದ್ದಿ ಸುಳ್ಯ ಯೂ ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.