ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಕ್ರೀಡಾಪಟುಗಳಿಗೆ ಸನ್ಮಾನ

0

ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯ ಕೆ.ಎಸ್. ಎಸ್ ಕಾಲೇಜಿನ ಬಹುಮಾನಿತರನ್ನು ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ನ.28 ರಂದು ಗೌರವಿಸಲಾಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಜರಗಿದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಹುಡುಗರ ಹಾಗೂ ಹುಡುಗಿಯರ ವಿಭಾಗದಲ್ಲಿ ಕೆ. ಎಸ್. ಎಸ್. ಕಾಲೇಜಿನ ಹುಡುಗರು ಹಾಗೂ ಹುಡುಗಿಯರು ತೃತೀಯ ಸ್ಥಾನವನ್ನ ಗಳಿಸಿದ್ದರು. ಆ ನಿಟ್ಟಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನವರು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡಿರುವರು. ವಿಜೇತರಾದ ಹುಡುಗರ ವಿಭಾಗದಲ್ಲಿ ಸುಮಂತ್ ,ಜೀವನ್ ವರುಣ್ , ದಿಶಾಂತ್ , ರಕ್ಷಿತ್ ,ವಿಜಯ್ ಕುಮಾರ್ , ಹುಡುಗಿಯರ ವಿಭಾಗದಲ್ಲಿ ಅರ್ಚನಾ, ಪುನೀತ , ಪ್ರತಿಕ್ಷ, ಪ್ರಗತಿ , ದೀಕ್ಷಾ ,ಹಾಗೂ ಹಂಪಿಕ ಅವರನ್ನು ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ರಾಮಚಂದ್ರ ಪಳಂಗಾಯ ವಹಿಸಿದ್ದು. ಕುಕ್ಕೆ ಸುಬ್ರಮಣ್ಯ ಲಯನ್ಸ್ ಕ್ಲಬ್ಬಿನ ಸ್ಥಾಪಕ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳ ನಾಡಿದರು. ಮುಖ್ಯ ಅತಿಥಿಗಳಾಗಿ ಕೆ. ಎಸ್ .ಎಸ್. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾl ದಿನೇಶ್ . ಲಯನ್ಸ್ ಕ್ಲಬ್ ಖಜಾಂಜಿ ಚಂದ್ರಶೇಖರ ಪಾಣೆತ್ತಿಲ ವೇದಿಕೆಯಲ್ಲಿದ್ದರು.

ಲಯನ್ಸ್ ಕ್ಲಬ್ಬಿನ ಸದಸ್ಯರುಗಳಾದ ಪ್ರಕಾಶ್ ಶೆಟ್ಟಿ ,ಕೃಷ್ಣಕುಮಾರ್ ಬಾಳುಗೋಡು, ದಿನೇಶ್ ಎಂಪಿ, ಮೋಹನ್ದಾಸ್ ರೈ ಸಭೆಯಲ್ಲಿ ಇದ್ದರು . ಕ್ಲಬ್ಬಿನ ಸದಸ್ಯ ಪವನ್ ಪ್ರಾರ್ಥಿಸಿದರು. ಕ್ಲಬ್ ಕಾರ್ಯದರ್ಶಿ ಸತೀಶ ಕೂಜುಗೂಡು ಸ್ವಾಗತಿಸಿದರು. ಕ್ಲಬ್ಬಿನ ಉಪಾಧ್ಯಕ್ಷ ಅಶೋಕ್ ಮೂಲೆ ಮಜಲು ಧನ್ಯವಾದ ಸಮರ್ಪಿಸಿದರು.ಕ್ಲಬ್ಬಿನ ಸದಸ್ಯೆ ವಿಮಲ ರಂಗಯ್ಯ ನಿರೂಪಿಸಿದರು.