ನಿಂತಿಕಲ್ಲು ಪ್ರಯಾಣಿಕರ ತಂಗುದಾಣದ ಸುತ್ತ ತುಂಬಿರುವ ಪ್ಲಾಸ್ಟಿಕ್ ತ್ಯಾಜ್ಯಗಳು

0


ತಂಗುದಾಣದ ಸುಂದರತೆಯನ್ನು ಕೆಡಿಸಿದ ಕಸದ ರಾಶಿ

ಬೆಳೆಯುತ್ತಿರುವ ನಿಂತಿಕಲ್ಲಿನಲ್ಲಿ ಪೇಟೆಯ ಹೃದಯ ಭಾಗದಲ್ಲಿರುವ ಪ್ರಯಾಣಿಕರ ತಂಗುದಾಣದ ಸುತ್ತ ಪ್ಲಾಸ್ಟಿಕ್ ತ್ಯಾಜ್ಯಗಳು, ಕಸದ ರಾಶಿಗಳು ತುಂಬಿ ಪರಿಸರದ ಸುಂದರತೆಯನ್ನು ಹಾಳು ಮಾಡಿರುವ ದೃಶ್ಯ ಕಂಡುಬಂದಿದೆ.
ನೂರಾರು ವಾಹನಗಳು ಮತ್ತು ಹೊರ ಊರಿನ ಪ್ರಯಾಣಿಕರಿಗೆ ಪುಣ್ಯಕ್ಷೇತ್ರಕ್ಕೆ ಸಂಪರ್ಕಿಸುವ ರಸ್ತೆ ಇದಾಗಿದ್ದು ರಸ್ತೆ ನಡುವಲ್ಲಿ ಬಿದ್ದಿರುವ ಕಸದ ರಾಶಿಗಳು ಊರಿನ ಹೆಸರನ್ನು ಹಾಳು ಮಾಡುವಂತೆ ಕಂಡು ಬರುತ್ತಿದೆ.


ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಪರಿಸರದ ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕಾಗಿದೆ ಎಂದು ಸಾರ್ವಜನಿಕರ ಕೋರಿಕೆಯಾಗಿದೆ.