ಭಗವದ್ಗೀತೆ ಕಂಠಪಾಠ ಹಾಗೂ ಭಾಷಣದಲ್ಲಿ ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆ ಗೆ ಹಲವು ಪ್ರಶಸ್ತಿಗಳು

0

    ಮಂಗಳೂರು ಸಂಸ್ಕೃತ ಸಂಘ ಮಂಗಳೂರು, ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ, ಶ್ರೀ ಸೋಂದ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ, ಶ್ರೀ ಸುಬ್ರಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಇವುಗಳ ಸಂಯುಕ್ತ  ಆಶ್ರಯದಲ್ಲಿ ನಡೆದ ಭಗವದ್ಗೀತಾ ಕಂಠಪಾಠ ಹಾಗೂ ಭಾಷಣ ಸ್ಪರ್ಧೆಯಲ್ಲಿ ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆ ವಿದ್ಯಾರ್ಥಿಗಳು ಹಲವಾರು ಬಹುಮಾನಗಳನ್ನು ಪಡೆದರು. ಎಲ್. ಕೆ.ಜಿ ಯು.ಕೆ.ಜಿ ವಿಭಾಗದಲ್ಲಿ ಭಗವದ್ಗೀತಾ ಕಂಠಪಾಠದಲ್ಲಿ  ನಿಹಾನ್ ಎಂ ಶೆಟ್ಟಿ ಪ್ರಥಮ ಯಜ್ಞ ಪ್ರಿಯ ದ್ವಿತೀಯ ಹಾಗೂ ಹನೀಶ ತೃತೀಯ ಸ್ಥಾನ ಪಡೆದರೆ, ಒಂದು ಮತ್ತು ಎರಡನೇ ತರಗತಿ ವಿಭಾಗದಲ್ಲಿ  ಸರ್ವಾಣ್ ಎಮ್ ಶೆಟ್ಟಿ ಪ್ರಥಮ ಚಿರಾಗ್ ಎಸ್ ದ್ವಿತೀಯ, ಮೂರು ಮತ್ತು ನಾಲ್ಕನೇ ತರಗತಿ ವಿಭಾಗದಲ್ಲಿ  ರುತ್ವಿಕ್ ಎಂ ದ್ವಿತೀಯ ಹಾಗೂ ಸರ್ವಾಣ್ ಎಂ ಜೈನ್ ತೃತೀಯ ಸ್ಥಾನ ಪಡೆದರು. 5 ರಿಂದ 7ನೇ ತರಗತಿ ವಿಭಾಗದಲ್ಲಿ ಸಾನ್ವಿ ಪಿ ಬಿ ಪ್ರಥಮ  ಶ್ರೀಪ್ರಸಾದ್ ದ್ವಿತೀಯ, ಪ್ರೌಢಶಾಲಾ ವಿಭಾಗದಲ್ಲಿ ಶಿಶಿರ ದ್ವಿತೀಯ ಸ್ಥಾನಗಳನ್ನು ಪಡೆದರು. ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ಐದರಿಂದ ಏಳನೇ ತರಗತಿಯ ವಿಭಾಗದಲ್ಲಿ ತೃಶಾ ಕೆ.ಎಚ್. ಪ್ರಥಮ, ಖುಷಿ ಎಂ ದ್ವಿತೀಯ, ಸಾನಿಕ ತೃತೀಯ ಸ್ಥಾನ ಗಳಿಸಿದರೆ, ಪ್ರೌಢಶಾಲಾ ವಿಭಾಗದಲ್ಲಿ ಅನನ್ಯ ಎಚ್ ದ್ವಿತೀಯ ಸ್ಥಾನ ಗಳಿಸಿದರು.