ಮೇನಾಲ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿನಿಶಿಪೂರ್ಣ ಭಜನಾ ಸಂಕೀರ್ತನೆ

0

ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ 35 ನೇ ವರ್ಷದ ನಿಶಿಪೂರ್ಣ ಭಜನಾ ಸಂಕೀರ್ತನೆಯು ಡಿ. 3 ರಂದು ಸಂಧ್ಯಾಕಾಲದಲ್ಲಿ ನಡೆಯಿತು.


ಸಂಜೆ ಸೂರ್ಯಸ್ತದ ಸಮಯದಲ್ಲಿ ಭಜನಾ ಸಂಕೀರ್ತನೆಯು ಆರಂಭಗೊಂಡು ದೀಪ ಪ್ರತಿಷ್ಠಾಪನೆಯಾಯಿತು. ರಾತ್ರಿ ಶ್ರೀ ದೇವರಿಗೆ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಪ್ರಾತ:ಕಾಲ ಸೂರ್ಯೋದಯಕ್ಕೆ ದೀಪ ವಿಸರ್ಜನೆಯೊಂದಿಗೆ ಭಜನಾ ಸಂಕೀರ್ತನೆಗೆ ಮಹಾಮಂಗಳಾರತಿಯಾಯಿತು.

ತಾಲೂಕಿನ ವಿವಿಧ ಭಜನಾ ಮಂಡಳಿಯ ಭಜಕರು ಆಗಮಿಸಿ ಸಂಕೀರ್ತನೆಯಲ್ಲಿ ಪಾಲ್ಗೊಂಡರು. ಆಗಮಿಸಿದ ಎಲ್ಲರಿಗೂ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು. ಮಂದಿರದ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.