ಪುತ್ತೂರಿನ ಪ್ರಜ್ಞಾ ಆಶ್ರಮದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ

0

ಪಿ.ವಿ.ಸುಬ್ರಮಣಿಯವರಿಗೆ ದಿವ್ಯಾಂಗ ಸಾಧಕ ಪ್ರಶಸ್ತಿ ಪ್ರದಾನ

ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಪುತ್ತೂರಿನ ಬಿರುಮಲೆ ಬೆಟ್ಟದ ಪ್ರಜ್ಞಾ ಆಶ್ರಮದಲ್ಲಿ ಡಿ. 3 ರಂದು ನಡೆದ ದಿವ್ಯಾಂಗ ಪ್ರತಿಭೆಗಳ ಸಾಹಿತ್ಯ ಸಂಭ್ರಮ ಹಾಗೂ ವಿಶಿಷ್ಟ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಕಲ್ಲುಗುಂಡಿಯ ಪಿ.ವಿ.ಸುಬ್ರಮಣಿಯವರಿಗೆ ದಿವ್ಯಾಂಗ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸುಮಾರು 12 ವರ್ಷಗಳಿಂದ ವಿಶೇಷಚೇತನರ ಶ್ರೇಯೋಭಿವೃದ್ಧಿಯಲ್ಲಿ ವಿಶೇಷ ಕಾಳಜಿ ವಹಿಸುತ್ತಿರುವ ಅವರು ವಿಕಲಚೇತನರಿಗಾಗಿ ಅನೇಕ ಸೌಲಭ್ಯಗಳನ್ನು ಒದಗಿಸುವಲ್ಲಿ ಶ್ರಮಿಸುತ್ತಿದ್ದಾರೆ. ಭಿನ್ನಸಾಮರ್ಥ್ಯರ ಜನರ ಸೇವೆಗಾಗಿ ಎಂ.ವಿ.ಗ್ರೂಪ್ ಆಫ್ ಸೋಶಿಯಲ್ ಸರ್ವಿಸಸ್ ಪುತ್ತೂರು ಸ್ಥಾಪಿಸಿದ್ದಾರೆ. ಇವರು ಮೂಲತಃ ಸಂಪಾಜೆ ಗ್ರಾಮದವರಾಗಿದ್ದು, ನೆಲ್ಲಿಕುಮೇರಿ ದಿ.ಪಳಣಿ ಮತ್ತು ಶ್ರೀಮತಿ ಜಯಲಕ್ಷ್ಮಿ ಯವರ ಪುತ್ರ.