ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ತರ ದಶಮಾನೋತ್ಸವ ಸಂಭ್ರಮ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ತರ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಕೃಷಿ ವಿಚಾರ ಗೋಷ್ಠಿ
ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಡಿ.16 ರಂದು ನಡೆಯಿತು.

ಕೃಷಿ ವಿಚಾರಗೋಷ್ಠಿಯಲ್ಲಿ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ವಹಿಸಿದ್ದರು.

ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ರವರು ಜಲ ಸಂರಕ್ಷಣೆಯಲ್ಲಿ ಮಳೆ ಕೊಯ್ಲಿನ ವಿಧಾನಗಳು ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಸಿ “ಇಂಗು ಗುಂಡಿ ಸರಳ ನೀರು ಇಂಗಿಸುವ ವಿಧಾನ. ಓಡುವ ನೀರನ್ನು ನಿಧಾನಗೊಳಿಸಿದಾಗ, ನಮ್ಮ ಚಾವಣಿ ಮೇಲೆ, ಜಮೀನು ಮೇಲೆ ಬಿದ್ದ ಮಳೆ ನೀರನ್ನು ಇಂಗಿಸಿದಾಗ
ನೀರಿನ ರಿಚಾರ್ಜ್ ಆಗುತ್ತದೆ. ಪಾತಾಳಕ್ಕೆ ಇಳಿದ ನೀರಿನ ಮಟ್ಟವನ್ನು ಮೇಲಕ್ಕೆ ತರುವ ಕೆಲಸ ಎಲ್ಲರೂ ಮಾಡ ಬೇಕಾಗಿದೆ”. ಎಂದು ಅವರು ವಿವರಿಸಿದರು.

ಅಡಿಕೆಯೊಂದಿಗೆ ಪರ್ಯಾಯ ಬೆಳೆಗಳ ಮೂಲಕ ಕೃಷಿಕರು ಸ್ವಾವಲಂಬಿಗಳಾಗುವ ಬಗೆ ಡಾ. ಅಶ್ವಿನಿ ಕೃಷ್ಣಮೂರ್ತಿ ವಾರಣಾಸಿ
ಮಾತನಾಡಿ “ಸಾವಯವ ಮಣ್ಣಿಗೆ ಬಳಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಲು ಉತ್ತಮ ಬೆಳೆ ಬೆಳೆಯಲು ಸಾಧ್ಯವಿದೆ. ಸಾವಯವ ಕೃಷಿ ಮಾಡುತ್ತಿರುವುದರಿಂದ ನಮ್ಮ ಭೂಮಿಯ ಮಣ್ಣಿನಲ್ಲಿ ಔಷಧಿ ಗುಣವಿದೆ ,ಪರಿಮಳವಿದೆ. ಅಡಿಕೆಯೊಂದಿಗೆ ನಾವು ಇತರ ಅನೇಕ ಬೆಳೆಗಳನ್ನು ಬೆಳೆಯುತ್ತೇವೆ. ನಮ್ಮಲ್ಲಿ ತರಬೇತಿಗಳನ್ನು ನೀಡುತ್ತೇವೆ. ನಮ್ಮಲ್ಲಿಅಧ್ಯಯನಕ್ಕೂ ಬರುತ್ತಿದ್ದಾರೆ”. ಎಂದು. ಅವರು ವಿವರಿಸಿದರು.


ಸಂಘದ ಅಧ್ಯಕ್ಷ ಗಣೇಶ್ ಪೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಗಣೇಶ್ ಪೈ ಸ್ವಾಗತಿಸಿದರು.ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ವಂದಿಸಿದರು.

ಯಕ್ಷಗಾನ ನಾಟ್ಯ ವೈಭವ :
ಸಾಂ‌ಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ನಾಟ್ಯ ವೈಭವ ಪ್ರದರ್ಶನ ಗೊಂಡಿತ್ತು. ಭಾಗವತರಾಗಿ ರವಿಚಂದ್ರ ಕನ್ನಡಿ ಕಟ್ಟೆ, ಗಿರೀಶ್ ರೈ ಕಕ್ಯೆಪದವು, ಚೆಂಡೆ-ಮದ್ದಲೆ ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಚಕ್ರತಾಳ ಮುರಾರಿ ಭಟ್ ಪಂಜಿಗದ್ದೆ, ಮುಮ್ಮೇಳ ರಾಕೇಶ್ ರೈ ಅಡ್ಕ,ರಕ್ಷಿತ್ ಶೆಟ್ಟಿ ಪಡ್ರೆ ಪಾಲ್ಗೊಂಡಿದ್ದರು