ಪಂಜ: ಜಾತ್ರಾ ಪೂರ್ವಭಾವಿ ಸಭೆ ,-ಉತ್ಸವ ಸಮಿತಿ ರಚನೆ

0

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯು ಪಂಜ ನಾಡಕಚೇರಿ ಉಪತಹಶೀಲ್ದಾರ್ ಚಂದ್ರಕಾಂತ್ ಎಮ್ ಆರ್ ರವರ ಅಧ್ಯಕ್ಷತೆಯಲ್ಲಿ ಡಿ.16 ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.

ಉತ್ಸವ ಸಮಿತಿ ಅಧ್ಯಕ್ಷರಾಗಿ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ಸರ್ವಾನುಮತದಿಂದ ಆಯ್ಕೆಯಾದರು.

ಉತ್ಸವ ಸಮಿತಿ ಸದಸ್ಯರಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕಳ, ಬಾಲಕೃಷ್ಣ ಗೌಡ ಕುದ್ವ, ಕುಶಾಲಪ್ಪ ಗೌಡ ದೊಡ್ಡಮನೆ, ಮಾಯಿಲಪ್ಪ ಗೌಡ ಎಣ್ಮೂರು, ಧರ್ಮಪಾಲ ಗೌಡ ಕಾಚಿಲ, ಧರ್ಮಣ್ಣ ನಾಯ್ಕ್ ಗರಡಿ, ಶ್ರೀಮತಿ ಪವಿತ್ರ ಕುದ್ವ ಮಲ್ಲೆಟಿ , ಸಂತೋಷ್ ರೈ ಪಲ್ಲತ್ತಡ್ಕ, ಸತ್ಯನಾರಾಯಣ ಭಟ್ ಕಾಯಂಬಾಡಿ, ಕೇಶವ ಗೌಡ ಕುದ್ವ, ಶರತ್ ಕುದ್ವ, ಅಶ್ವಿನ್ ಬಾಬ್ಲುಬೆಟ್ಟು, ಪವನ್ ಪಲ್ಲತ್ತಡ್ಕ, ಕುಮಾರ ಕಕ್ಯಾನ, ತಿಮ್ಮಪ್ಪಗೌಡ ಪುತ್ಯ, ಚಿನ್ನಪ್ಪ ಸಂಕಡ್ಕ ಆಯ್ಕೆಯಾದರು, ಕಾರ್ಯಕ್ರಮದಲ್ಲಿ ಮಹೇಶ್ ಕುಮಾರ್ ಕರಿಕಳ ಪ್ರಸ್ತಾವಿಕ ಮಾತನಾಡಿದರು. ಬಾಲಕೃಷ್ಣ ಗೌಡ ಕುದ್ವ ಸ್ವಾಗತಿಸಿದರು ಮತ್ತು ವಂದಿಸಿದರು.

ಸಭೆಯಲ್ಲಿ ಹಿರಿಯರಾದ ಆನಂದ ಗೌಡ ಕಂಬಳ, ಅರ್ಚಕ ರಾಮಚಂದ್ರ ಭಟ್, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಶಂಕರ ಭಟ್ ,ಗಂಗಾಧರ ಗೌಡ ಗುಂಡಡ್ಕ ,ರಜಿತ್ ಭಟ್ ಪಂಜಬೀಡು, ಲೋಕೇಶ್ ಅಕ್ರಿಕಟ್ಟೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.