ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷರಾಗಿ ಡಾ.ಕೆ.ವಿ.ಚಿದಾನಂದ ಪುನರಾಯ್ಕೆ

0

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಡಾ| ಕೆ.ವಿ ಚಿದಾನಂದ ಅವರು ಪುನರಾಯ್ಕೆಗೊಂಡಿದ್ದಾರೆ. ಎಒಎಲ್ಇ ಹಾಲಿ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಅವರನ್ನು ಮತ್ತೊಂದು ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ 2023-24 ನೇ ಸಾಲಿನ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಪಾಧ್ಯಕ್ಷರಾಗಿ ಶ್ರೀಮತಿ ಶೋಭಾ ಚಿದಾನಂದ, ಕಾರ್ಯದರ್ಶಿಗಳಾಗಿ ಕೆ.ವಿ. ಹೇಮನಾಥ್ ಹಾಗೂ ಡಾ|ಐಶ್ವರ್ಯಾ ಕೆ.ಸಿ., ಕೋಶಾಧಿಕಾರಿಯಾಗಿ ಡಾ| ಗೌತಮ್ ಗೌಡ ಎ.ಜಿ. ಆಯ್ಕೆಯಾದರು. ಸದಸ್ಯರಾಗಿ ಜಗದೀಶ್ ಎ.ಎಚ್., ಮೀನಾಕ್ಷಿ ಕೆ.ಎಚ್. ಹಾಗೂ ಧನಂಜಯ ಮದುವೆಗದ್ದೆ ಆಯ್ಕೆಯಾದರು. ಮುಂದಿನ ಸಾಲಿನ ಲೆಕ್ಕ ಪರಿಶೋಧಕರಾಗಿ ರಾಮುಲು ನಾಯ್ಡು ಮತ್ತು ಕಂಪನಿಯವರನ್ನು ನೇಮಿಸಲಾಯಿತು.


ಇದಕ್ಕೂ ಮೊದಲು ಎಒಎಲ್ಇ ವಾರ್ಷಿಕ ಮಹಾಸಭೆಯು ಕೆವಿಜಿ ಆಯುರ್ವೇದ ಮಹಾವಿದ್ಯಾಲಯದಲ್ಲಿರುವ ಸಂಘದ ಕಚೇರಿಯಲ್ಲಿ ನಡೆಯಿತು. ಈ ವೇಳೆ ಎಒಎಲ್ಇ ಹಾಲಿ ಪ್ರಧಾನ ಕಾರ್ಯದರ್ಶಿಯಾಗಿರುವ ಅಕ್ಷಯ್ ಕೆ.ಸಿ. ಅವರು 2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರೆ ವಾರ್ಷಿಕ ಲೆಕ್ಕ ಪತ್ರವನ್ನು ಸಂಘದ ಕೋಶಾಧಿಕಾರಿ ಡಾ| ಗೌತಮ್ ಗೌಡ ಎ.ಜಿ. ಮಂಡಿಸಿದರು. 2023-24 ನೇ ಸಾಲಿನ ಸಾಲಿನ ಆಯವ್ಯಯ ಪಟ್ಟಿಯನ್ನು ಕಾರ್ಯದರ್ಶಿ ಹೇಮನಾಥ್ ಕೆ.ವಿ. ಸಭೆಯ ಮುಂದಿಟ್ಟರು. ವಾರ್ಷಿಕ ಲೆಕ್ಕ ಪತ್ರ ಹಾಗೂ ಆಯವ್ಯಯ ಪಟ್ಟಿಯನ್ನು ಸಭೆಯ ಮುಂದಿಟ್ಟು ಅವುಗಳನ್ನು ಅನುಮೋದಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.