ಸುಬ್ರಹ್ಮಣ್ಯ: ಚಂಪಾಷಷ್ಠಿಯಂದು 194 ಭಕ್ತರಿಂದ ಎಡೆಸ್ನಾನ ಸೇವೆ

0

ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚಂಪಾಷಷ್ಠಿಯ ಪವಿತ್ರ ಡಿ.18 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ 194 ಭಕ್ತರು ಎಡೆಸ್ನಾನ ಸೇವೆಗೈದರು.

ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ಷಷ್ಠಿಯ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. 118 ಪುರುಷರು, ಮತ್ತು 76 ಮಹಿಳೆಯರು ಸೇವೆ ನೆರವೇರಿಸಿದರು. ಚಂಪಾಷಷ್ಠಿ ಜಾತ್ರೋತ್ಸವದ ಚೌತಿ, ಪಂಚಮಿ ಮತ್ತು ಷಷ್ಠಿಯ ದಿನ ಭಕ್ತರು ಸ್ವಯಂಪ್ರೇರಿತರಾಗಿ ಎಡೆಸ್ನಾನ ಸೇವೆ ಸಲ್ಲಿಸಿದ್ದರು. ಈ ಮೂಲಕ ಎಡೆಸ್ನಾನ ಸೇವೆಯು ಸಂಪನ್ನವಾಯಿತು.