ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೊತ್ಸವವು ಜ.3 ರಿಂದ ಜ.13 ರವರೆಗೆ ನಡೆಯಲಿದ್ದು ಗೊನೆ ಮುಹೂರ್ತವು ಡಿ.28 ರಂದು ನಡೆಯಿತು.
ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಡಾ.ಹರಪ್ರಸಾದ್ ತುದಿಯಡ್ಕ,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸದಸ್ಯರಾದ ಮೀನಾಕ್ಷಿ ಗೌಡ, ಲಿಂಗಪ್ಪ ಗೌಡ ಕೇರ್ಪಳ,ವೀರಕೇಸರಿ ಕರಣಿಕರಮನೆ,ಗಿರಿಜಾಶಂಕರ ತುದಿಯಡ್ಕ,ವಿದ್ಯಾನಂದ,ರಾಮಕೃಷ್ಣ ಮುರೂರು,ಕೃಪಾಶಂಕರ ತುದಿಯಡ್ಕ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.