ಪಂಜ: ಶ್ರೀ ದುರ್ಗಾ ಶಾಮಿಯಾನ ಶುಭಾರಂಭ

0

ಪಂಜದ ಮುಖ್ಯ ರಸ್ತೆ ಸಮೀಪ ಧರ್ಮಶ್ರೀ ಕಾಂಪ್ಲೆಕ್ಸ್ ನಲ್ಲಿ ಶಿವಪ್ರಸಾದ್ ಬಿಟ್ಟಂಗಿಲ ರವರ ಮಾಲಿಕತ್ವದ ಶ್ರೀ ದುರ್ಗಾ ಶಾಮಿಯಾನ ಡಿ.28 ರಂದು ಶುಭಾರಂಭ ಗೊಂಡಿದೆ.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಪಂಜ ಮೆಸ್ಕಾಂ ಶಾಖಾಧಿಕಾರಿ ಮನಮೋಹನ್, ಧರ್ಮಶ್ರೀ ಕಾಂಪ್ಲೆಕ್ಸ್ ಮಾಲಕ ಅಶೋಕ್ ಮೇಲ್ಪಾಡಿ, ಸತೀಶ್ ಕಾನತ್ತಿಲ ,ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಸಿ ,ಶ್ರೀಮತಿ ಚಿನ್ನಮ್ಮ ಬಿಟ್ಟಂಗಿಲ, ಭಾಸ್ಕರ್ ಕೊರಪ್ಪಣೆ, ವೆಂಕಟ್ರಮಣ ಭಟ್ ಕಂರ್ಬಿ, ದೀಪಕ್ ದೊಡ್ಡಮನೆ,, ಶರತ್ ಎಣ್ಣೆಮಜಲು ಮೊದಲಾದವರು ಉಪಸ್ಥಿತರಿದ್ದರು.


ವೈಧಿಕ ಕಾರ್ಯಕ್ರಮವನ್ನು ಅರ್ಚಕ ಹರಿಪ್ರಸಾದ್ ಕಲ್ಲೂರಾಯ ರವರು ನೆರವೇರಿಸಿದರು. ಶಿವಪ್ರಸಾದ್ ಬಿಟ್ಟಂಗಿಲ ಸ್ವಾಗತಿಸಿದರು. ನಮ್ಮಲ್ಲಿ ಮದುವೆ ಮತ್ತು ಶುಭ ಸಮಾರಂಭಗಳಿಗೆ ಉತ್ತಮವಾದ ಶಾಮಿಯಾನ, ಶೀಟ್,ಚಯರ್, ಟೇಬಲ್, ಹಾಗೂ ಅಡುಗೆ ಪಾತ್ರೆಗಳು ಕ್ಲಪ್ತ ಸಮಯದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ
.