p>

ಬೇಸಾಯದ ಪಾಠ’-ಕೆಸರಿನ ಆಟ

0

ಮಕ್ಕಳಿಗೆ ಬೇಸಾಯದ ಕುರಿತು ಅರಿವು ಮೂಡಿಸುವ ಮತ್ತು ನಶಿಸಿ ಹೋಗುತ್ತಿರುವ ಕೆಸರು ಗದ್ದೆ ಆಟ ಮಕ್ಕಳಿಗೆ ತಿಳಿಸುವ ವಿನೂತನ ಕಾರ್ಯಕ್ರಮವೊಂದು ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಡಿ.28 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪರಿವಾರ ಪಂಜ ರೈತ ಉತ್ಪಾದಕರ ಕಂಪೆನಿ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಉದ್ಘಾಟಿಸಿ ಗದ್ದೆ ಬೇಸಾಯ, ಕೆಸರಿನ ಆಟ ಕುರಿತು ವಿವರಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ ನೇರಳ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಜೇಸಿಐ ಪಂಜ ಪಂಚಶ್ರೀ ರಜತ ಸಂಭ್ರಮದ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು, ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಲೀಲಾ ಕುಮಾರಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಭುವನೇಶ್ವರಿ ಕಂಬಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರಜ್ವಲ್ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾ ಕುಮಾರಿ ಸ್ವಾಗತಿಸಿದರು. ಶಿಕ್ಷಕ ಹರೀಶ್ ಕುಮಾರ್ ಕಜೆ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಭುವನೇಶ್ವರಿ ಕಂಬಳ ವಂದಿಸಿದರು.