ವೆಂಕಟರಮಣ ಸೊಸೈಟಿ ‌ಉಪ್ಪಿನಂಗಡಿ‌ ಶಾಖೆ ಸ್ಥಳಾಂತರ

0

ಸುಳ್ಯದಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 15ನೇ‌ ಉಪ್ಪಿನಂಗಡಿ ಶಾಖೆ ಸರ್ವೆ ಕಾಂಪ್ಲೆಕ್ಸ್ ನಿಂದ ಎಚ್.ಎಂ ಆಡಿಟೋರಿಯಂ ಬಳಿಯ ಬಿ.ಎಂ ಆರ್ಕೇಡ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಕೆಎಸ್ಆರ್ ಟಿಸಿ ನಿವೃತ್ತ ಉದ್ಯೋಗಿ ಬೆಳ್ಯಪ್ಪ ಗೌಡ ಕಣಿಯ ದೀಪ ಬೆಳಗಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಿ.ಸಿ ಜಯರಾಮ ವಹಿಸಿದ್ದರು. ಅತಿಥಿಗಳಾಗಿ ಅಶ್ವಿನಿ ಇಲೆಕ್ಟ್ರಾನಿಕ್ಸ್ ಮಾಲಕ, ಉದ್ಯಮಿ ಪ್ರಕಾಶ್, ಬಿ.ಎಂ ಆರ್ಕೇಡ್ ಮಾಲಕ ಇಮ್ತಿಯಾಝ್ ಭಾಗವಹಿಸಿದ್ದರು.

ಸಂಘದ ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕರಾದ ಕೆ.ಸಿ ಸದಾನಂದ, ಪಿ.ಎಸ್. ಗಂಗಾಧರ, ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದರು. ಮೋಹನ್ ರಾಮ್ ಸುಳ್ಳಿ ಸ್ವಾಗತಿಸಿ, ದಿನೇಶ್ ಮಡಪ್ಪಾಡಿ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಎಂ, ಸಹಾಯಕ ವ್ಯವಸ್ಥಾಪಕ ಕುಸುಮಾಧರ ಗುಡ್ಡೆ, ಶಾಖಾ ವ್ಯವಸ್ಥಾಪಕ ಕೃಷ್ಣಪ್ರಸಾದ್, ಸಿಬ್ಬಂದಿಗಳಾದ ನಿಕ್ಷಿತಾ, ಲೋಕೇಶ್, ಕಾರ್ತಿಕ್, ಸುರೇಶ್ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.