ಸುಬ್ರಹ್ಮಣ್ಯ ದೇವಸ್ಥಾನದ ವಸತಿ ಗೃಹದ ರೂಂಬಾಯ್ ಪಕೀರಪ್ಪ ನಿಧನ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಉದ್ಯೋಗಿ ಹಾವೇರಿ ಮೂಲದ ಯುವಕ ಪಕೀರಪ್ಪ ರವರು ಡಿ.28 ರಂದು ಸಂಜೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 31 ವರ್ಷ ವಯಸ್ಸಾಗಿತ್ತು.

ಪಕೀರಪ್ಪರು ಸುಬ್ರಹ್ಮಣ್ಯದ ಅಕ್ಷರ ವಸತಿ ಗೃಹದಲ್ಲಿ ರೂಂ ಬಾಯ್ ಆಗಿದ್ದರು. ಲೋ ಬಿ.ಪಿ. ಯಿಂದ ನಿಧನರಾದರೆಂದು ತಿಳಿದುಬಂದಿದೆ.

ಮೃತರು ಪತ್ನಿ, ತಂದೆ, ತಾಯಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.