ಸುಳ್ಯ ತಾಲೂಕು ಬಂಟರ ಸಮಾವೇಶ

0

ಸಮಾಜದ ವಿವಿಧ ಕ್ಷೇತ್ರದಲ್ಲಿ ಬಂಟ ಸಮುದಾಯ ಮುಂಚೂಣಿಯಲ್ಲಿದೆ : ಗುರುದೇವಾನಂದ ಸ್ವಾಮೀಜಿ

ವಿದ್ಯಾರ್ಥಿವೇತನ – ಪ್ರತಿಭಾ ಪುರಸ್ಕಾರ – ಯುವ ಪುರಸ್ಕಾರ ಹಾಗೂ ಸಾಧಕರ ಸನ್ಮಾನ

ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ವತಿಯಿಂದ ಬಂಟರ ಸಮಾವೇಶವು ಸುಳ್ಯದ ಕೇರ್ಪಳ ಬಂಟರ ಭವನದಲ್ಲಿ ಡಿ.31ರಂದು ನಡೆಯಿತು. ಸಮಾವೇಶವನ್ನು ಒಡಿಯೂರು ಶ್ರೀ ಗುರುದೇದತ್ತ ಸಂಸ್ಥಾಪನಮ್ ನ ಪರಮಪೂಜ್ಯ ಗುರುದೇವಾನಂದ ಸ್ವಾಮೀಜಿ ಅವರು ದೀಪ ಬೆಳಗಿಸಿ, ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತನಾಡಿ ಸಮಾಜವನ್ನು ಪ್ರೀತಿಸುವ ಗುಣ ಬಂಟ ಸಮುದಾಯದಲ್ಲಿದೆ. ಅದ್ದರಿಂದ ಸಮುದಾಯದವರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಇದನ್ನು ಉಳಿಸಿಕೊಂಡು ಮುಂದುವರೆಯುವುದು ನಮ್ಮ ಕರ್ತವ್ಯ. ಶಿಕ್ಷಣ ಕ್ಷೇತ್ರಕ್ಕೂ ಬಂಟ ಸಮುದಾಯ ಒತ್ತುಕೊಟ್ಟಿದ್ದು, ಈ ಮೂಲಕ ಸನಾತನ ಧರ್ಮದ ಉಳಿವಿಗಾಗಿ ಸಮುದಾಯದವರು ಶ್ರಮಪಡಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪುರಸ್ಕೃತರಾದ ಡಾ. ಎ. ಸದಾನಂದ ಶೆಟ್ಟಿ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಮಾವೇಶದಲ್ಲಿ ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಯುವ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

ವೇದಿಕೆಯಲ್ಲಿ ಜಾಗತಿಕ ಬಂಟ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕುವೆಂಪು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪುರಸ್ಕೃತ ಡಾ. ಎ. ಸದಾನಂದ ಶೆಟ್ಟಿ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಬಿ. ರಮಾನಾಥ ರೈ, ಬೆಂಗಳೂರು ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು, ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಸಂಚಾಲಕ ಸೀತಾರಾಮ ರೈ ಸವಣೂರು, ಸುಳ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ಗಂಗಾಧರ ರೈ ಸೋಣಂಗೇರಿ, ಸುಭಾಶ್ಚಂದ್ರ ರೈ ತೋಟ, ಕರುಣಾಕರ ಶೆಟ್ಟಿ, ಜೆ.ಕೆ. ರೈ, ಕರುಣಾಕರ ಶೆಟ್ಟಿ ಬೆಳ್ಳಾರೆ, ಶಿವರಾಮ ರೈ, ಶ್ರೀಮತಿ ಇಂದಿರಾ ರೈ, ಶ್ರೀಮತಿ ಕಮಲಾಕ್ಷಿ ಬಿ. ಶೆಟ್ಟಿ, ದಯಾಕರ ಶೆಟ್ಟಿ ನಾವೂರು, ಪದ್ಮನಾಭ ರೈ ಪೆರುವಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಸ್ವಾಗತಿಸಿದರು.