ಸುಳ್ಯದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

0

ಕೇಂದ್ರ ಸರಕಾರದ ಅಭಿಯಾನವಾದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಇಂದು ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸುಳ್ಯ ನಗರ ಪಂಚಾಯತ್ ಮತ್ತು ಬ್ಯಾಂಕ್ ಆಫ್ ಬರೋಡ ಸುಳ್ಯ ಶಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ಸುಳ್ಯ ತಹಶೀಲ್ದಾರ್ ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸರಕಾರದ ಯೋಜನೆಗಳ ಸದುಪಯೋಗವನ್ನು ನಾಗರಿಕರು ಪಡೆದುಕೊಳ್ಳಬೇಕು. ಎಂದು ಹೇಳಿದರು.


ವೇದಿಕೆಯಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಸದಸ್ಯರಾದ ಎಂ.ವೆಂಕಪ್ಪ ಗೌಡ,ಮುಖ್ಯಾಧಿಕಾರಿ ಸುಧಾಕರ್, ಬ್ಯಾಂಕ್ ಆಫ್ ಬರೋಡ ಸುಳ್ಯ ಶಾಖೆ ಮ್ಯಾನೇಜರ್ ಅಶೋಕ್ ವಿಮಾನ್, ನಗರ ಪಂಚಾಯತ್ ಸದಸ್ಯರುಗಳಾದ ಬುದ್ಧನಾಯ್ಕ್,ಶಶಿಕಲಾ ಎ. ನೀರಬಿದಿರೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಟೈಲರಿಂಗ್ ವೃತ್ತಿಯಲ್ಲಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಶ್ರೀಮತಿ ರಜನಿ ಶುಭಕರ್ ಮತ್ತು ತೆಂಗು ವ್ಯಾಪಾರ ಉದ್ಯಮಿ ಬಿ. ಎಲ್. ಶಿವರಾಮ ರನ್ನು ನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಸದಸ್ಯರುಗಳಾದ ಕಿಶೋರಿ ಶೇಟ್, ಶೀಲಾಕುರುಂಜಿ, ಸರೋಜಿನಿ ಪೆಲ್ತಡ್ಕ, ಡೇವಿಡ್ ಧೀರಾ ಕ್ರಾಸ್ತಾ,ಶಿಲ್ಪಾಸುದೇವ್, ಪವಿತ ಪ್ರಶಾಂತ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಫೈನಾನ್ಸಿಯಲ್ ಲಿಟರಸಿ ಕೌನ್ಸಿಲರ್ ಸುಜಾತ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಪಂಚಾಯತ್ ನ ಉದ್ಯೋಗಿ ಶ್ರೀಮತಿ ಜಯಲಕ್ಷ್ಮಿ ಸ್ವಾಗತಿಸಿ, ದಿಲೀಪ್ ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರ ಸರ್ಕಾರದ ಸುಮಾರು 23 ಜನಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವ ಮತ್ತು ಪ್ರಚಾರ ಪಡಿಸುವ ನಿಟ್ಟಿನಲ್ಲಿ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.