ಹೊಸ ವರುಷ ಬಂದಿದೆ‌ ನೋಡಿ -2024

0

ಹೊಸ ವರ್ಷದ ಆಗಮನವು ಆಗಿದೆ ಇಂದು
ಕಷ್ಟ ಸುಖಗಳ ಆಗಮನವು ಆಗುವುದು ಮುಂದು
ಹೇಗೆ ಕಳೆಯಿತು ಈ 2023ರ‌ ವರ್ಷ
ತಂದಿತು ಎಲ್ಲರ ಮೊಗದಲ್ಲಿ ಹರುಷ

ಎಲ್ಲಾ ರೀತಿಯ ಪಾಠಗಳನ್ನು ಕಲಿಸಿ
ಅದರ ಮಧ್ಯೆಯು ನಮ್ಮನ್ನು‌ ನಗಿಸಿ
ಲಾಭ ನಷ್ಟಗಳು ನಮ್ಮ ಜೀವನದಲ್ಲಿ
ಬೇಸರ ಮಾಡಿಕೊಳ್ಳದೆ ‌ನಮ್ಮ ಮನದಲ್ಲಿ

ಜೀವನವು‌ ನಮಗೆ ಸರಿ – ಸಮಾನವಾದ ಪೈಪೋಟಿ ‌ನೀಡಿ
ಒಳ್ಳೆಯ ದಿನಗಳ ಬಗ್ಗೆ ದೇವರಲ್ಲಿ ಬೇಡಿ
ಹಳೆಯ ದಿನಗಳು ಮತ್ತೆ ಮತ್ತೆ ಕಾದಿತು
ಆ ನೆನಪುಗಳನ್ನು ಜೀವನವು ತಂದಿತು

ಹಲವಾರು ಹಬ್ಬಗಳನ್ನು ನಾವು ಆಚರಿಸಿ
ಇವು ಎಲ್ಲಾ ಜನರ ಮನಮರಿಸಿ
ಈ ವರ್ಷದ ಪರಿಶ್ರಮದ ದಿನಗಳು
ಗೆಲ್ಲುವುದು ಎಲ್ಲರ ಮೈಮನಗಳು

ಪಾಠ- ಆಟ ಇನ್ನಿತರ ವಿಷಯಗಳು
ತರುವುದು ಸಂತಸ ಮತ್ತಷ್ಟು ದಿನಗಳು
ಒಳ್ಳೆಯ ಇನ್ನಷ್ಟು ಗುಣಗಳನ್ನು ಬೆಳೆಸಿ
ಆದು – ಹೋದ ದಿನಗಳನ್ನು ಮರೆಸಿ

ಮುಗುಳ್ನಗುತ್ತಾ ಪ್ರವೇಶಿಸೋಣ ವರ್ಷ 2024ನ್ನು
ಮರೆಯದಿರು 2023ರ ಒಳ್ಳೆಯ ಪಾಠಗಳನ್ನು
ಇದು‌ ನಮ್ಮ ನಿಮ್ಮೆಲ್ಲರ ವರುಷದ ಮೊದಲ ದಿನ
ಸಂತೋಷ, ಆನಂದಗಳಿಂದ ಕೂಡಲಿ ಪ್ರತಿ ಮನ