ಜ. 21: ಸುಳ್ಯ ತಾಲೂಕು ಮಹಿಳಾ ಸೊಸೈಟಿ ಚುನಾವಣೆ, ಜ. 9ರಿಂದ ನಾಮಪತ್ರ ಸಲ್ಲಿಕೆ ಆರಂಭ

0

ಸುಬ್ರಹ್ಮಣ್ಯದಲ್ಲಿ ಪ್ರಧಾನ ಕಚೇರಿ ಹೊಂದಿ, ಬೆಳ್ಳಾರೆ, ಸುಳ್ಯ ಮತ್ತು ಜಾಲ್ಸೂರಿನಲ್ಲಿ ಶಾಖೆಗಳನ್ನು ಹೊಂದಿರುವ ಸುಳ್ಯ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆ ಜ. 21ರಂದು‌ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಜ. 9ರಿಂದ ಆರಂಭಗೊಳ್ಳಲಿದೆ.

ಪ್ರಸ್ತುತ ಸಂಘದಲ್ಲಿ ರಾಜೀವಿ ಆರ್ ರೈಯವರು ಅಧ್ಯಕ್ಷರಾಗಿಯೂ, ಶ್ರೀಮತಿ ಲೀಲಾ ಮನಮೋಹನ್ ಉಪಾಧ್ಯಕ್ಷರಾಗಿಯೂ‌ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು 17 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಸುಳ್ಯ ತಾಲೂಕಿನಿಂದ 7 ಮತ್ತು ಕಡಬ ತಾಲ್ಲೂಕಿನಿಂದ 6 ಸಾಮಾನ್ಯ ಸ್ಥಾನಗಳಿಗೆ ಅವಕಾಶವಿದೆ. ಪ.ಪಂ. ಮೀಸಲು‌ ಕ್ಷೇತ್ರದಿಂದ 1, ಪ.ಜಾತಿ 1, ಹಿಂದುಳಿದ ಪ್ರವರ್ಗ ಎ ಮತ್ತು ಬಿ ತಲಾ ಒಂದೊಂದು ಸ್ಥಾನಗಳಿಗೆ ಮೀಸಲಾಗಿದೆ. ಜ. 13 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಜ. 14 ನಾಮಪತ್ರ ಪರಿಶೀಲನೆ ನಡೆಯಲಿದೆ. ಜ. 15 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ.