ಬೆಳ್ಳಾರೆ : ಬಾಲಕನಿಗೆ ಪಿಕಪ್ ಡಿಕ್ಕಿ – ಆಸ್ಪತ್ರೆಗೆ ದಾಖಲು

0

ಬಾಲಕನೋರ್ವನಿಗೆ ಪಿಕಪ್ ಗುದ್ದಿರುವ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ. ಜ.1ರಂದು ದರ್ಖಾಸಿನ ಸರ್ಕಾರಿ ಶಾಲೆ ಬಳಿ ಉಮ್ಮರ್ ಎಂಬುವವರು ಚಲಾಯಿಸುತ್ತಿದ್ದ ಪಿಕಪ್ ಏಕಾಏಕಿ ಬಂದು ನಿಶಾಂತ್ ಎಂಬ ನಿಂತಿದ್ದ ಬಾಲಕನಿಗೆ ಗುದ್ದಿದೆ.

ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಅಪಘಾತ ಸಂಭವಿಸಿದ್ದು ರಸ್ತೆಗೆ ಬಿದ್ದ ಬಾಲಕನಿಗೆ ಗಾಯಗಳಾಗಿದೆ. ತಕ್ಷಣ ಆತನನ್ನು ಸ್ಥಳೀಯರು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿದ್ದಾರೆ. ಬಾಳಿಲ ಗ್ರಾಮ, ಸುಳ್ಯ ನಿವಾಸಿ ಆನಂದ (45) ಎಂಬವರ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ :02/2024 ಕಲಂ : 279,337 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.