ಬೂಡು ಪನ್ನೆಬೀಡು ಭಗವತಿ ನಾಲ್ಕು ಸ್ಥಾನ ಚಾವಡಿಯಿಂದ ಚೆನ್ನಕೇಶವ ದೇವರ ಜಾತ್ರೋತ್ಸವಕ್ಕೆ ಪಯ್ಯೋಳಿ ಆಗಮನ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಧ್ವಜಾರೋಹಣದಂದು ಸಂಪ್ರದಾಯದಂತೆ ಬೂಡು ಭಗವತಿ ಪನ್ನೆಬೀಡು ನಾಲ್ಕು ಸ್ಥಾನ ದೈವಗಳ ಚಾವಡಿಯಿಂದ ಬಲ್ಲಾಳ ಅರಸರ ಪಯ್ಯೋಳಿ ಆಗಮನವಾಯಿತು.


ಬಲ್ಲಾಳ ಅರಸರ ಪ್ರತಿನಿಧಿಯಾಗಿ ಬೂಡು ರಾಧಾಕೃಷ್ಣ ರೈಯವರು ನೇತೃತ್ವ ವಹಿಸಿದ್ದರು. ಚೆನ್ನಕೇಶವ ದೇವಸ್ಥಾನದಿಂದ ಮೊಕ್ತೇಸರ ಪೈಕಿ ಕೃಪಾಶಂಕರ ತುದಿಯಡ್ಕ ರವರು ಪನ್ನೆಬೀಡಿನ ಚಾವಡಿಗೆ ಆಗಮಿಸಿ ಪ್ರಾರ್ಥಿಸಿ ಬಲ್ಲಾಳ ಅರಸರ ಪ್ರತಿನಿಧಿಯನ್ನು ಹಾಗೂ ಪಯ್ಯೋಳಿಯನ್ನು ಸ್ವಾಗತಿಸುವುದು ರೂಢಿ. ಚೆನ್ನಕೇಶವ
ದೇವರ ಧ್ವಜಾರೋಹಣ ವಾಗಿ ಬಲಿ ಉತ್ಸವ ನಡೆಯುವ ಸಂದರ್ಭದಲ್ಲಿ ಬಲ್ಲಾಳ ಅರಸರ ಪಯ್ಯೋಳಿ ಹಾಗೂ ಪ್ರತಿನಿಧಿಯವರು ಉಪಸ್ಥಿತಿರಿರಬೇಕಾದುದು ಸಂಪ್ರದಾಯವಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯ ಭಕ್ತರು ಪಾಲ್ಗೊಂಡರು.