ಜ.16 : ಪೆರುವಾಜೆ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

0

ಪ್ರಯುಕ್ತ ವಿಶೇಷ ಹಸಿರು ಹೊರೆಕಾಣಿಕೆ ಮೆರವಣಿಗೆ

ಪಂಜ ಸೀಮೆಯ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಪ್ರಯುಕ್ತ ಜ.16 ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ ವಿಶಿಷ್ಟ ರೀತಿಯಲ್ಲಿ ನೆರವೇರಲಿದೆ.

ಜ.16 ರಂದು ಸಂಜೆ 3 ಗಂಟೆಗೆ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಳಿಯಿಂದ ಮೆರವಣಿಗೆಗೆ ಚಾಲನೆ ಸಿಗಲಿದೆ. ಸುಮಂಗಲಿಯರಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಮೆರವಣಿಗೆಯು ಬೆಳ್ಳಾರೆ ಪೇಟೆಯ ಮುಖ್ಯರಸ್ತೆಯ ಮೂಲಕ ಸಾಗಲಿದೆ. ವಿವಿಧ ಕಲಾ ಪ್ರಕಾರಗಳ ಮೆರಗು, ಬ್ಯಾಂಡ್ ವಾದನದೊಂದಿಗೆ ಪೆರುವಾಜೆ ಶ್ರೀ ಕ್ಷೇತ್ರಕ್ಕೆ ಬಂದು ಹಸಿರುವಾಣಿ ಸಮರ್ಪಣೆಗೊಳ್ಳಲಿದೆ.
ಪೂರ್ಣ ಕುಂಭ ಸ್ವಾಗತದಲ್ಲಿ ಭಾಗವಹಿಸುವ ಸುಮಂಗಲಿಯರು ಕಲಶ, ತೆಂಗಿನಕಾಯಿಯೊಂದಿಗೆ ಮಧ್ಯಾಹ್ನ 2 ಗಂಟೆಗೆ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಳಿ ಹಾಜರಿರಬೇಕು.ಹಸಿರುವಾಣಿಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ದೇವಾಲಯದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.