ರೋಟರಿ ಸುಳ್ಯ ಸಿಟಿ ವತಿಯಿಂದ ಉಚಿತ ಪಾದರಕ್ಷೆ ಹಂಚಿಕೆ

0

ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಜ. 9ರಂದು ಆಲೆಟ್ಟಿಯ ಮೊರಂಗಲ್ಲು ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ವೃದ್ಧ ಮಹಿಳೆಯರಿಗೆ ಮತ್ತು ಗಂಡಸರಿಗೆ ಉಚಿತ ಚಪ್ಪಲಿ ಹಸ್ತಾಂತರ ಕಾರ್ಯಕ್ರಮ ನಡೆಯಿತು. ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ರೊ| ಗಿರೀಶ್ ನಾರ್ಕೋಡುರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಲೆಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತರವರು ಭಾಗವಹಿಸಿ ಶುಭ ಹಾರೈಸಿದರು.

ನಿಯೋಜಿತ ಅಧ್ಯಕ್ಷ ರೊ| ಶಿವಪ್ರಶಾದ್ ಕೆ ವಿ ಹಾಗು ಇತರೆ ಸದಸ್ಯರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಮೊರಂಗಲ್ಲು ಮತ್ತು ಕುಡೇಕಲ್ಲು ಪರಿಶಿಷ್ಟ ಜಾತಿ ಕಾಲೊನಿಯ ಸುಮಾರು 30 ಮಂದಿಗೆ ಪಾದರಕ್ಷೆ ಹಂಚಲಾಯಿತು.