ಇನ್ಸೂರೆನ್ಸ್ ಲ್ಯಾಪ್ಸ್ : ಸುಬ್ರಹ್ಮಣ್ಯದ 108 ಅ್ಯಂಬುಲೆನ್ಸ್ ಸೇವೆ ಸ್ಥಗಿತ

0

ಇನ್ಸೂರೆನ್ಸ್ ಲ್ಯಾಪ್ಸ್ ಆಗಿ ಕುಕ್ಕೆ ಸುಬ್ರಹ್ಮಣ್ಯ ದ 108 ಅ್ಯಂಬುಲೆನ್ಸ್ ಸೇವೆ ಜ. 9ರಿಂದ ಸ್ಥಗಿತಗೊಳ್ಳುವಂತಾಗಿದೆ.

ಸುಬ್ರಹ್ಮಣ್ಯದ 108 ಅ್ಯಂಬುಲೆನ್ಸ್ ನಿಂತಲ್ಲೇ ನಿಂತಿರುವುದನ್ನು ಗಮನಿಸಿದ ಗ್ರಾಮಸ್ಥರು ಅ್ಯಂಬುಲೆನ್ಸ್ ಸಿಬ್ಬಂದಿಗಳಲ್ಲಿ ವಿಚಾರಿಸಿದಾಗ ಇನ್ಸುರೆನ್ಸ್ ಲ್ಯಾಪ್ಸ್ ಆಗಿರುವ ವಿಚಾರ ತಿಳಿಸಿರುವುದಾಗಿ ತಿಳಿದುಬಂದಿದೆ.

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಆಪತ್ಕಾಲಕ್ಕೆ ನೆರವಾಗುತ್ತಿದ್ದ 108 ಸೇವೆ ಸ್ಥಗಿತಗೊಂಡಿರುವುದು ವಿಪರ್ಯಾಸವೇ ಸರಿ. ಕೂಡಲೇ ಸಂಬಂಧಪಟ್ಟ ಗುತ್ತಿಗೆ ಕಂಪನಿಯವರು ಈ ಬಗ್ಗೆ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಿ ಎಂದು ನಾಗರಿಕರು ಆಗ್ರಹಿಸಿದ್ದಾರೆ.