ಸಂಪಾಜೆ : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣೆ ಕಾರ್ಯಗಾರ

0

ಸಂಪಾಜೆ ಪದವಿಪೂರ್ವ ಕಾಲೇಜಿನ (ಪ್ರೌಢ ಶಾಲಾ ವಿಭಾಗ) ಇಲ್ಲಿ ಸಂಪಾಜೆ ಕ್ಲಸ್ಟರ್ ಮತ್ತು ಪೆರಾಜೆ ಕ್ಲಸ್ಟರ್ ನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣೆ ಕಾರ್ಯಗಾರ ಜ. ೧೮ರಂದು ನಡೆಯಿತು.
ಈ ಕಾರ್ಯಗಾರದಲ್ಲಿ ಸೋಮವಾರ ಪೇಟೆ ತಾಲೂಕಿನ ವಿಘ್ನೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಜಯಕುಮಾರ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.

೨೦೨೪ ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸುವ ೮೦ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮತ್ತು ಅತ್ಯುತ್ತಮ ಅಂಕ ಪಡೆದು ಉತ್ತೀರ್ಣರಾಗಲು ಅಗತ್ಯವಿರುವ ಮಾಹಿತಿಯನ್ನು ಪಡೆದುಕೊಂಡರು ,ಕಾರ್ಯಕ್ರಮದಲ್ಲಿ ಸಂಪಾಜೆ,ಪೆರಾಜೆ ಮತ್ತು ಚೆಂಬು ಸರ್ಕಾರಿ ಪ್ರೌಢ ಶಾಲೆಯ ಒಟ್ಟು ೮೦ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.