ಮೊಗ್ರ : ಕಾಲಾವಧಿ ಜಾತ್ರೋತ್ಸವ ಆರಂಭ

0

ಭಜನಾ ತರಬೇತಿ ಶಿಬಿರ ಉದ್ಘಾಟನೆ -ಭಜನಾ ಸಂಭ್ರಮ

ಗುತ್ತಿಗಾರು ಗ್ರಾಮದ ಕಮಿಲ ಇತಿಹಾಸ ಪ್ರಸಿದ್ಧ ಮೊಗ್ರ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವಕ್ಕೆ ಜ.15 ರಂದು ಗೊನೆ ಕಡಿಯುವ ಮೂಲಕ ಚಾಲನೆ ದೊರೆತಿದ್ದು, ಜ. 19 ರಂದು ಮಧ್ಯಾಹ್ನ ಮೊಗ್ರ ದೊಡ್ಡಮನೆಯಲ್ಲಿ ಶ್ರೀ ದೇವರಿಗೆ ಸಮಾರಾಧನೆ ನಡೆದ ಬಳಿಕ ರಾತ್ರಿ ಮಲ್ಕಜೆ ಮಾಳಿಗೆಯಿಂದ ಭಂಡಾರ ಆಗಮಿಸಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಮಿಲ-ಮೊಗ್ರ-ಬಳ್ಳಕ್ಕ ಒಕ್ಕೂಟ ಇವರ ಸಹಯೋಗದಲ್ಲಿ ನಡೆಯುವ ಭಜನಾ ತರಬೇತಿ ಶಿಬಿರವನ್ನು ದೈವಸ್ಥಾನದ ಆಡಳಿತ ಮೊಕ್ತೆಸರರಾದ ಎಂ.ಎನ್. ವೆಂಕಟ್ರಮಣ ಮೊಗ್ರ ಉದ್ಘಾಟಿಸಿ ಶುಭ ಹಾರೈಸಿದರು. ತರಬೇತುದಾರರಾಗಿ ರಮೇಶ್ ಮೆಟ್ಟಿನಡ್ಕ ಉಪಸ್ಥಿತರಿದ್ದು ತರಬೇತಿ ನೀಡಿದರು.

ನಂತರ ಶ್ರೀದುರ್ಗಾ ಭಜನಾ ಮಂಡಳಿ ಮರಕತ ಇವರಿಂದ ಭಜನಾ ಸಂಭ್ರಮ ಕಾರ್ಯಕ್ರಮ ನಡೆಯಿತು.

ಇಂದು ಜ. 20 ರಂದು ಬೆಳಿಗ್ಗೆ ಶ್ರೀ ಉಳ್ಳಾಕುಲು ನೇಮ, ನಂತರ ಶ್ರೀ ಕುಮಾರ ನೇಮ ನಡೆಯಲಿದೆ. ಸಂಜೆ ಉಳ್ಳಾಕುಲು ಭಂಡಾರ ಹೊರಟು, ಶ್ರೀ ಪುರುಷ ದೈವದ ನೇಮ, ರಾತ್ರಿ ಶ್ರೀ ರುದ್ರಚಾಮುಂಡಿ ನೇಮ, ಶ್ರೀ ಮಲೆಚಾಮುಂಡಿ ನೇಮ ನಡೆಯಲಿದೆ.


ಜ. 21 ರಂದು ಬೆಳಿಗ್ಗೆ ಇತಿಹಾಸ ಪ್ರಸಿದ್ಧ ಶ್ರೀ ಭೈರಜ್ಜಿ ನೇಮ ನಡೆದು, ಬಳಿಕ ಭಂಡಾರ ಹೊರಡಲಿದೆ.