ಸುಳ್ಯ ಕೆವಿಜಿ ಜಂಕ್ಷನ್ ನಲ್ಲಿ ಪೈಪ್ ಒಡೆದು ನೀರು ಹರಿಯುತ್ತಿದೆ

0

ನಗರಾಡಳಿತಕ್ಕೆ ಇದು ಕಾಣುತ್ತಿಲ್ಲವೇ ?

ಸುಳ್ಯ ಕೆ.ವಿ.ಜಿ. ಜಂಕ್ಷನ್ ನಲ್ಲಿ ಡಾ. ಕುರುಂಜಿಯವರ ಪ್ರತಿಮೆ ಬಳಿ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದೆ.
ಕಳೆದ 15ದಿನಗಳಿಂದಲೂ ನೀರು ಪೋಲಾಗುತ್ತಿದ್ದು, ನಗರ ಪಂಚಾಯತ್ ಇದರ ಕುರಿತು ತಕ್ಷಣ ಕ್ರಮಕೈಗೊಂಡು ಕುಡಿಯುವ ನೀರು ಪೋಲಾಗುವುದನ್ನು ತಡೆಯಬೇಕಾಗಿದೆ.

ನಗರ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಇದನ್ನು ಇನ್ನೂ ಯಾಕೆ ಗಮನಿಸಿಲ್ಲ ಎಂಬುದೇ ಪ್ರಶ್ನೆ.