ಸುಳ್ಯ ತಾಲೂಕು ಯುವವಾಹಿನಿ ಘಟಕದ ಪದಗ್ರಹಣ ಸಮಾರಂಭ

ಯುವವಾಹಿನಿಯು ಸಂಘಟನೆಗೆ ಒತ್ತು ನೀಡಿ ರಾಜಕೀಯ ರಹಿತವಾಗಿ ಬೆಳೆಯುತ್ತಿರುವ ಸಾಮಾಜಿಕ ಸಂಘಟನೆಯಾಗಿದೆ. ವಿದ್ಯೆ, ಉದ್ಯೋಗ ಮತ್ತು ಸಂಪರ್ಕದ ಸಂಕಲ್ಪದಡಿಯಲ್ಲಿ ಯುವಕರನ್ನು ಸ್ವಾರ್ಥ ರಹಿತವಾಗಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವoತೆ ಮಾಡುತ್ತಿದೆ ಎಂದು ಪುತ್ತೂರು ಅಕ್ಷಯ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಯಂತ ನಡುಬೈಲು ಹೇಳಿದರು. ಅವರು ಸುಳ್ಯದ ಕನ್ನಡ ಭವನದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಸುಳ್ಯ ತಾಲೂಕು ಘಟಕದ 2026ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ, ಸನ್ಮಾನ ಮತ್ತು ವಿದ್ಯಾನಿಧಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. 2026ನೇ ಸಾಲಿನ ನೂತನ ಅಧ್ಯಕ್ಷ ಮಹೇಶ್ ಕಲ್ಲಪಣೆ, ಕಾರ್ಯದರ್ಶಿ ರಂಜಿತ್ ದರ್ಖಾಸ್ತು, ನಿಕಟಪೂರ್ವಧ್ಯಕ್ಷ ಹರೀಶ್ ಯು ಕೆ ಬೆಳ್ಳಾರೆ, ಉಪಾಧ್ಯಕ್ಷರುಗಳಾಗಿ ನೂತನ ಪ್ರವೀಣ್ ನೆಟ್ಟಾರ್, ಬಾಲಕೃಷ್ಣ ತಡಗಜೆ, ಜತೆ ಕಾರ್ಯದರ್ಶಿಯಾಗಿ ಚಂದ್ರಾವತಿ ಸುಳ್ಯ, ಕೋಶಧಿಕಾರಿಯಾಗಿ ಹರೀಶ್ ದೋಳ ಸೇರಿದಂತೆ ಘಟಕದ ನಿರ್ದೇಶಕರುಗಳು ಅಧಿಕಾರ ವಹಿಸಿಕೊಂಡರು. ಸುಳ್ಯ ತಾಲೂಕು ಯುವವಾಹಿನಿ ಘಟಕದ ಅಧ್ಯಕ್ಷ ಹರೀಶ್ ಯು ಕೆ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಎ ಕೃಷ್ಣಕುಮಾರ್, ಯುವವಾಹಿನಿ ಘಟಕದ ಕಾರ್ಯದರ್ಶಿ ನವೀನ್ ಕುಮಾರ್ ರಾಮಕುಮೇರಿ ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಸಂದೇಶ ಪ್ರಚಾರಕರಾಗಿ ಆಯ್ಕೆಯಾದ ರೋಹಿತ್ ರೆಂಜಾಳ ಅವರನ್ನು ಅಭಿನಂದಿಸಲಾಯಿತು. ಸ್ಥಾಪಕಾಧ್ಯಕ್ಷ ಶಿವಪ್ರಸಾದ್ ಕೆ ವಿ ಪ್ರಸ್ತಾವಿಸಿ ಸ್ವಾಗತಿಸಿದರು. ನೂತನ ಪ್ರವೀಣ್ ನೆಟ್ಟಾರ್ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ರಂಜಿತ್ ದರ್ಖಾಸ್ತು ವಂದಿಸಿದರು. ಚಂದ್ರಶೇಖರ ಹೈದoಗೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸನ್ಮಾನ
ಭಾರ ಎತ್ತುವ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಸುಚಿನ್ ಕುಮಾರ್ ಮೊಗಪ್ಪೆ ಮತ್ತು ಟ್ರಾಂಪೆಟ್ ವಾದನ ಕ್ಷೇತ್ರದ ಸಾಧಕ ಅಕ್ಷಯ್ ಕೆ ಪಿ ಅವರನ್ನು ಘಟಕದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾನಿಧಿ ವಿತರಣೆ
ದಿ. ಪ್ರವೀಣ್ ನೆಟ್ಟಾರ್ ಸ್ಮರಣಾರ್ಥ ಘಟಕದ ವತಿಯಿಂದ ಶ್ರೇಯಾ ಕೆ ಅವರಿಗೆ ವಿದ್ಯಾನಿಧಿ ವಿತರಿಸಲಾಯಿತು.









ಉಮೇಶ್ ಮಣಿಕ್ಕರ










