ಬೆಳ್ಳಾರೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ನೇತೃತ್ವದಲ್ಲಿ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪದಡಿಯಲ್ಲಿ ಮಾನವ ಸರಪಳಿ

0

ಎಸ್.ಕೆ.ಎಸ್.ಎಸ್‌ಎಫ್ ಕೇಂದ್ರ ಸಮಿತಿಯ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರಜಾಪ್ರಭುತ್ವ ದಿನವಾದ ಜನವರಿ 26ರಂದು ಏಕಕಾಲದಲ್ಲಿ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆ ಸಂಕಲ್ಪವನ್ನಿಟ್ಟು ಬೃಹತ್ ಮಾನವ ಸರಪಳಿ ದ.ಕ ಈಸ್ಟ್ ಜಿಲ್ಲಾ ಕಾರ್ಯಕ್ರಮ ಬೆಳ್ಳಾರೆಯಲ್ಲಿ ನಡೆಯಿತು.

ಬೆಳ್ಳಾರೆಯ ತಂಬಿನಮಕ್ಕಿ ಬಳಿಯಿಂದ ಬೃಹತ್ ಜಾಥಾ ಆರಂಭಗೊಂಡು ಬೆಳ್ಳಾರೆಯ ಮಸೀದಿ ವರೆಗೆ ಸಾಗಿಬಂದು ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.
ಅಗಮಿಸಿದ ಅತಿಥಿಗಳು ಮತ್ತು ಸಾರ್ವಜನಿಕರು,ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಜ್ಞೆ ಸ್ವೀಕರಿಸಿದರು.
ನಂತರ ಮಸೀದಿ ಮುಂಭಾಗದಲ್ಲಿ ನಡೆದ ಬೃಹತ್ ಮಾನವ ಸರಪಳಿ ಸಭಾ ಕಾರ್ಯಕ್ರಮದಲ್ಲಿ ಸಯ್ಯದ್ ಹಬೀಬ್ ರಹ್ಮಾನ್ ತಂಜಳ್ ದವಾ ನಿರ್ವಹಿಸಿದರು. ಸಮಸ್ತ ಕೇಂದ್ರ ಸಮಿತಿ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಉದ್ಘಾಟಿಸಿದರು.
ಎಸ್ ಕೆ ಎಸ್ ಎಸ್ ಎಫ್ ದ.ಕ ಜಿಲ್ಲಾ ಟ್ರೇಂಡ್ ಸಂಚಾಲಕ ಇಕ್ಬಾಲ್ ಬಾಳಿಲ ದಿಕ್ಸೂಚಿ ಬಾಷಣಮಾಡಿದರು.

ಎಸ್.ಕೆ.ಎಸ್.ಎಸ್.ಎಫ್. ಕೇಂದ್ರ ಸಮಿತಿ ಸದಸ್ಯರಾದ ಅಬೂಬಕರ್ ರಿಯಾಜ್ ರಹ್ಮಾನಿ ಮಾನವ ಸರಪಳಿ ಸಂದೇಶ ಭಾಷಣ ನಡೆಸಿದರು.

ಮಾನವ ಸರಪಳಿಯ ಸೌಹಾರ್ದ ರ್ಯಾಇಲಿಯನ್ನು ಮಾನವ ಸರಪಳಿ ಕಾರ್ಯಕ್ರಮ ದ ಸಂಚಾಲಕರಾದ ಅಬ್ದುಲ್ ಖಾದರ್ ಹಾಜಿ ಬಾಯಾಂಬಾಡಿ ಮತ್ತು ದ.ಕ ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಕೋಶಾಧಿಕಾರಿ ಹನೀಫ್ ದೂಮಳಿಕೆ ಯವರಿಗೆ ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿ ಅಧ್ಯಕ್ಷ ಅಬೂಭಕ್ಕರ್ ಹಾಜಿ ಮಂಗಳ ರವರು ಸಮಸ್ತದ ಧ್ವಜ ಹಸ್ತಾಂತರ ಮಾಡುವ ಮೂಲಕ ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ಮಾಡಿದರು.

ಕಾರ್ಯಕ್ರಮದಲ್ಲಿ ಅಯಾನ್ ಗ್ರೂಪ್ಸ್ ದುಬೈಯ ಬಿ.ಎಸ್ ಅನ್ಸಾರ್,ಸಪ್ವಾನ್ ಪೈಝಿ ಮಹರಾ,ಸುಳ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಕಲಂದರ್ ಎಲಿಮಲೆ, ಸಯ್ಯದ್ ಅಪ್ನಾನ್ ತಂಙಳ್, ಅಬ್ದುಲ್ಲಾ ಪೈಝಿ ಪೈಂಬಚ್ಚಾಲ್,ಸುಲೈಮಾನ್ ಮೌಲವಿ ಕಲ್ಲೆಗ,ಜಾಬೀರ್ ಪೈಝಿ,ಅಬ್ದುಲ್‌ ಹಮೀದ್ ದಾರಿಮಿ ಸಂಪ್ಯ,ಹಸನ್ ಬಾಹಸನಿ,ಅಶ್ರಫ್ ರಹ್ಮಾನಿ,ಅಬ್ದುಲ್‌ ರಶೀದ್ ಹಾಜಿ ಪರ್ಲಡ್ಕ,ಜಮಾಲುದ್ದೀನ್ ಹಾಜಿ ಮುಕ್ವೆ,ಕೆ ಕೆ ಉಸ್ಮಾನ್ ಹಾಜಿ ಕೊಲ್ಪೆ,ಎನ್ ಎಸ್ ಅಬ್ದುಲ್ಲಾ ಹಾಜಿ,ಚಿಂತಕ ಲಕ್ಷ್ಮೀಶ ಗಬಲಡ್ಕ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿ ಅಧ್ಯಕ್ಷ ಶ್ರೀರಾಮ ಪಾಟಾಜೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೂರುಲ್ ಹುದಾ ಮಾಡನ್ನೂರ್ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು.

ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಉಪಾಧ್ಯಕ್ಷ ಜಮಾಲುದ್ದೀನ್ ಕೆ.ಎಸ್., ಅಕ್ಬರ್ ಕರಾವಳಿ, ಸ್ವಾಗತ ಸಮಿತಿಯ ವೈಸ್ ಚೇರ್‌ಮೆನ್ ಅಬ್ದುಲ್ ಖಾದರ್ ಮೊಟ್ಟೆಂಗಾರ್, ವಲಯ ಕಾರ್ಯದರ್ಶಿ ಆಶೀಕ್,ಯು ಪಿ ಬಶೀರ್, ಮೊದಲಾದವರು ಇದ್ದರು.


ಎಸ್ ಕೆ ಎಸ್ ಎಸ್ ಎಫ್ ದ.ಕ.ಜಿಲ್ಲಾ ಈಸ್ಟ್ ಕಾರ್ಯದರ್ಶಿ ಹಾರಿಸ್ ಕೌಸರಿ ಸ್ವಾಗತಿಸಿ,
ಎಸ್‌ ಕೆ ಎಸ್ ಎಸ್ ಎಫ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಿ ಎ ಝಕರಿಯ್ಯ ಅಸ್ಲಮಿ ಕಾರ್ಯಕ್ರಮ ನಿರೂಪಿಸಿ. ಸ್ವಾಗತ ಸಮಿತಿ ಕನ್ವಿನರ್ ಸಿದ್ದೀಕ್ ಅಡ್ಕ ವಂದಿಸಿದರು.